ಲೇಖಕ ಇಟಿಗಿ ಈರಣ್ಣ ಹಾಗೂ ಪ್ರೊ. ಕೆ. ಓಂಕಾರಪ್ಪ ಅವರು ಜಂಟಿಯಾಗಿ ಪ್ರಕಟಿಸಿರುವ ಕೃತಿ-ಹಳಚಿದ ಬೆಳಕು. 12ನೇ ಶತಮಾನದ ಶಿವಶರಣರ ಚಿಂತನೆಗಳನ್ನು, ಮಂಥನದ ರೀತಿ-ನೀತಿಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಬದುಕಿನ ಸಾರ್ಥಕತೆಗೆ ಶರಣರ ಚಿಂತನೆಗಳು ಎಷ್ಟು ಮುಖ್ಯ ಎಂಬುದನ್ನು ಚಿಂತನಾತ್ಮಕ ಬರಹಗಳ ಮೂಲಕ ತೋರಿದ್ದಾರೆ. ಶರಣರ ಚಿಂತನೆಗಳೇ ಜೀವನ ಸಾರ್ಥಕತೆಗೆ ಅಂತಿಮ. ಅವಿಲ್ಲದ ಹೊರತು ಬದುಕಿಗೆ ಅರ್ಥ ಬಾರದು. ತುಂಬಾ ವೈಜ್ಞಾನಿಕ ಅರ್ಥದಲ್ಲಿ ಇರುವ ಚಿಂತನೆಗಳನ್ನು ಚರ್ಚಿಸಲಾಗಿದೆ.
‘ಇಈ’ ಎಂದು ಸಾಹಿತ್ಯಲೋಕದಲ್ಲಿ ಚಿರಪರಿಚಿತರಾಗಿದ್ದ ಇಟಿಗಿ ಈರಣ್ಣ (2 ಜುಲೈ 1950) ಅವರು ಮೂಲತಃ ಹಿರೇಹಡಗಲಿಯವರು. ಹೊಸಪೇಟೆಯ ವಿಜಯನಗರ ಕಾಲೇಜು ಸೇರಿದಂತೆ ಬಳ್ಳಾರಿಯ ವಿ.ವಿ. ಸಂಘದ ಕಾಲೇಜುಗಳಲ್ಲಿ 33 ವರ್ಷ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ‘ಕನ್ನಡ ಶಾಯಿರಿಗಳು’ (1977) ಇಟಿಗಿ ಈರಣ್ಣನವರ ಮೊದಲ ಕೃತಿ. ಉರ್ದು ಭಾಷೆಯಲ್ಲಿ ಜನಪ್ರಿಯ ಕಾವ್ಯ ಪ್ರಕಾರ ಆಗಿರುವ ಶಾಯಿರಿಯನ್ನ ಕನ್ನಡ ಸಾರಸ್ವತ ಲೋಕಕ್ಕೆ ಯಶಸ್ವಿಯಾಗಿ ಪರಿಚಯಿಸಿದ ಹಿರಿಮೆ ಅವರದು. ಹರಿವಂಶ್ ರಾಯ್ ಬಚ್ಚನ್ ಅವರ ‘ಮಧುಶಾಲಾ’ ಕೃತಿಯನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದ ಈರಣ್ಣ ಅವರು ಪಂಜಾಬಿ ಕತೆ-ಕವಿತೆಗಳನ್ನು ಕನ್ನಡಕ್ಕೆ ...
READ MORE