ಲೇಖಕರಾದ ಶರತ್ ಭಟ್ ಸೇರಾಜಿ ಅವರ ವೈಚಾರಿಕ ಲಲಿತ ಪ್ರಬಂಧಗಳ ಸಂಗ್ರಹ ರೂಪವೇ ’ಬಾಗಿಲು ತೆರೆಯೇ ಸೇಸಮ್ಮ’.
ಈ ಕೃತಿಯಲ್ಲಿರುವ ವೈಚಾರಿಕ ಬರಹಗಳು ಅನೇಕ ಲೇಖಕರ ಕುರಿತಾದ, ವ್ಯಕ್ತಿಗಳ ಸ್ವಾರಸ್ಯಕರ ಘಟನೆಗಳ ಕುರಿತಾದದ್ದು. ಅಲೆ ಅಲೆ ಅಲೆ ಗುರುತ್ವದ ಅಲೆಯೋ, ಮೋಹನ ಮುರಲಿ ನಾನು ಕಂಡಂತೆ ನನಗೆ ಕಂಡಷ್ಟು, ಥಟ್ ಅಂತ ಹೇಳಿ, ಅರ್ಥವೆಂಬ ಊಸರವಳ್ಳಿ, ಬಾಗಿಲು ತೆರೆಯೇ ಸೇಸಮ್ಮ, ಮರ್ಯಾದೆ ತೆಗೆಯುವ ಕಲೆ,ಇಂಗ್ಲೀಶ್ ಎನೆ ಕಣಿದಾಡುವುದೆನ್ನೆದೆ, ಲೆಕ್ಕ ಹಾಕಿ ಸುಳ್ಳು ಹೇಳಿ, ಸಿನೆಮಾ ಮತ್ತು ಕಳ್ಳತನ, ಪರಂಪರೆಯ ಬೇರುಗಳು ಮತ್ತು ಹೊರಗಿನ ಗಾಳಿ ಬೆಳಕು, ಹಂಸಗೀತೆ, ಸರಿಗನ್ನಡಂ ಗೆಲ್ಗೆ, ಕಾರಂತಜ್ಜನ ಕಥೆಗಳು, ಬಲಿ ಚಕ್ರವರ್ತಿಯ ತ್ರಿವಿಕ್ರಮ, ನಮ್ಮ ತಲೆಯೂ ನಮ್ಮ ಹರಟೆಯೂ ಮುಂತಾದ ಲೇಖನಗಳನ್ನು ಇಲ್ಲಿ ಕಾಣಬಹುದು.
ಕನ್ನಡ ಸಾಹಿತ್ಯದ ವೈವಿಧ್ಯಮಯ ಲೇಖಕರ, ಅವರ ಅಭಿರುಚಿಗಳ, ವಿಷಯ ಪ್ರಸ್ತಾಪಗಳ ಹರಟೆ, ಮಾತುಕತೆಯನ್ನೂ ಸುಲಲಿತವಾಗಿ ಈ ಕೃತಿಯಲ್ಲಿ ಲೇಖಕರು ನಿರೂಪಿಸಿದ್ದಾರೆ.
ದಕ್ಷಿಣ ಕನ್ನಡದ ಹಳ್ಳಿಯೊಂದರಿಂದ ಬಂದಿರುವ ಶರತ್ ಅನ್ನಕ್ಕೆ ಸಾಫ್ಟವೇರ್ ಎಂಜಿನಿಯರಿಂಗ್ ವೃತ್ತಿಯನ್ನು ನೆಚ್ಚಿಕೊಂಡು, ಬಿಡುವಾದಾಗ ಹವ್ಯಾಸಗಳ ಬೆನ್ನು ಹತ್ತುತ್ತಾರೆ. ವಿಜ್ಞಾನ, ಗಣಿತ ಅಂದರೆ ಪ್ರೀತಿ, ಸಿನೆಮಾ, ಸಾಹಿತ್ಯ ಅಂದರೆ ಜೀವ. ರಂಗಭೂಮಿ, ಯಕ್ಷಗಾನ ಇವೆಲ್ಲವೂ ಇವರ ಆಸಕ್ತಿಯ ಕ್ಷೇತ್ರಗಳೇ. ಸಾಹಿತ್ಯ, ಭಾಷಾಶಾಸ್ತ್ರ, ಸಿನೆಮಾ, ಗಣಿತ, ವಿಜ್ಞಾನ, ಜಾಗತಿಕ ವಿದ್ಯಮಾನಗಳಿಂದ ಹಿಡಿದು ಅರ್ಥಶಾಸ್ತ್ರದವರೆಗೆ ಅಷ್ಟಿಷ್ಟು ಬರೆದಿದ್ದಾರೆ. ಅನುವಾದವೂ ಇವರ ಆಸಕ್ತಿಯ ಕ್ಷೇತ್ರವೇ. ಅಂಕಿತ ಪ್ರತಿಭೆ ಮಾಲಿಕೆಯಲ್ಲಿ, "ಬಾಗಿಲು ತೆರೆಯೇ ಸೇಸಮ್ಮ" ಎಂಬ ವೈಚಾರಿಕ ಲಲಿತ ಪ್ರಬಂಧಗಳ ಕೃತಿ ಜೋಗಿಯವರ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ಪಾದೆಕಲ್ಲು ನರಸಿಂಹ ಭಟ್ಟ ಎಂಬ ಸಂಸ್ಕೃತ ...
READ MORE