ಅರಿವು ಸಾಮಾನ್ಯವೆ

Author : ಬಿ.ಎ. ವಿವೇಕ ರೈ

Pages 296

₹ 250.00




Year of Publication: 2013
Published by: ಅಭಿನವ ಪ್ರಕಾಶನ
Address: # 17, 18 - 2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ಪಿಎಫ್ ಬಡಾವಣೆ, ವಿಜಯನಗರ, ಬೆಂಗಳೂರು-560040
Phone: 09448804905

Synopsys

ಖ್ಯಾತ ಸಾಹಿತಿ, ಚಿಂತಕ ಡಾ. ಬಿ.ಎ. ವಿವೇಕ ರೈ ಅವರು ಸಂಸ್ಕೃತಿ ಚಿಂತನೆ ಕುರಿತ ಬರಹಗಳ ಸಂಕಲನ-ಅರಿವು ಸಾಮಾನ್ಯವೆ. ಶರಣ ಅಲ್ಲಮಪ್ರಭುವಿನ ಚಿಂತನೆಯ ಸಾಲು ಇದು. ಭೂತ ವರ್ತಮಾನಗಳ ಮಹತ್ವವನ್ನರಿಯದೇ ಭವಿಷಯವನ್ನು ಕಲ್ಪಿಸಲಾಗದು. ಅದರಂತೆ, ಭೂತವನ್ನು ತಿಳಿಯದೇ ವರ್ತಮಾನವನ್ನು ವ್ಯಾಖ್ಯಾನಿಸಲಾಗದು. ಇದು ಸಾಮಾನ್ಯ ಜ್ಞಾನ. ಇದನ್ನು ಕಡೆಗಣಿಸಲಾಗದು. ಕಾಲದ ಯಾವುದೇ ಕ್ಷಣವೂ ಮಹತ್ವದ ಕೊಂಡಿಯೇ ಆಗಿರುತ್ತದೆ. ಹೀಗಾಗಿ, ಕಾಲವನ್ನು ನಿರ್ಲಕ್ಷಿಸುವಂತಿಲ್ಲ. ಇಂತಹ ಶಾಶ್ವತ ಸತ್ಯಗಳತ್ತ ಓದುಗರ ಚಿಂತನೆಯನ್ನು ಕೇಂದ್ರೀಕರಿಸುವ ಬರಹಗಳು ಇಲ್ಲಿ ಸಂಕಲನಗೊಂಡಿವೆ.

About the Author

ಬಿ.ಎ. ವಿವೇಕ ರೈ
(08 December 1946)

ಡಾ. ಬಿ.ಎ.ವಿವೇಕ ರೈ ಸಂಸ್ಕೃತಿ ಚಿಂತಕರು. ಕನ್ನಡ-ತುಳು ಭಾಷೆಯ ಆಂತರಿಕ ಶಕ್ತಿ-ಸಂಪತ್ತನ್ನು ಸಂವರ್ಧಿಸಿದ ವಿದ್ವಾಂಸರು. ಅವರ ಹುಟ್ಟೂರು ಪುತ್ತೂರು ತಾಲೂಕಿನ 'ಪುಣಚಾ'. (ಜನನ: 1946ರ ಡಿಸೆಂಬರ್ 8ರಂದು), ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ, ಮತ್ತೂರಿನಲ್ಲಿ ಪಿಯುಸಿ, ಬಿಎಸ್ಸಿ ವ್ಯಾಸಂಗ, ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರಕೇಂದ್ರ ದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜೊತೆಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾ.ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ.  ಕನ್ನಡ ಮತ್ತು ತುಳು ಭಾಷೆಯ ಬಗ್ಗೆ ಅಪಾರ ಒಲವು-ಪಾಂಡಿತ್ಯ ಉಳ್ಳವರು. ಭಾಷಾ ಅಧ್ಯಯನದ ಮಾದರಿಗಳನ್ನು ರೂಪಿಸಿದ ವಿದ್ವಾಂಸರು. ಸಂಶೋಧನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ, ರೀಡರ್, ಪ್ರಾಧ್ಯಾಪಕ, ...

READ MORE

Related Books