ಲೇಖಕಿ ಶೃತಿ ನರಸಿಂಗಪ್ಪ ಹೊನ್ನಾಕಟ್ಟಿ ಅವರ ಕೃತಿ-ಕನ್ನಡ ಸಂಸ್ಕೃತಿ. ನಮ್ಮ ಸಂಸ್ಕೃತಿ, ಕಾವ್ಯ ಸಂಸ್ಕೃತಿ, ಬಸವ ಸಂಸ್ಕೃತಿ, ಜನಪದ ಸಂಸ್ಕೃತಿ, ಗ್ರಾಮೀಣ ಶಿಕ್ಷಣ ಸಂಸ್ಕೃತಿ, ಕನ್ನಡದಲ್ಲಿ ಬೋಧನೆ, ಸಮಸ್ಯೆ, ಪರಿಹಾರ -ಈ ಅಧ್ಯಾಯಗಳಡಿ ವಿಷಯಗಳನ್ನು ಚರ್ಚಿಸಲಾಗಿದೆ. ಸಾಹಿತಿ ಡಾ. ಜಯಮಂಗಲ ಚಂದ್ರಶೇಖರ್ ಕೃತಿಗೆ ಮುನ್ನುಡಿ ಬರೆದು ‘ಮನುಷ್ಯನ ಆದಿಮ ಸ್ಥಿತಿಯಿಂದ ಹಿಡಿದು ಸದ್ಯದ ನಾಗರಿಕತೆಯವರೆಗೂ ಮನುಜನ ಹಾಡು-ಪಾಡು ಜೀವನ ಗತಿಯ ಸ್ಥಿತಿಯ ಕತೆಯೇ ಎಂಬುದನ್ನು ಮುಂದಿಟ್ಟು, ಓದುಗರ ಗಮನ ಸೆಳೆಯಲು ಲೇಖಕಿ ಪ್ರಯತ್ನಿಸಿದ್ದಾರೆ. ಸಂಸ್ಕೃತಿಯ ವಿಚಾರವನ್ನು ತಿಳಿಸುತ್ತಾ, ಮೌಲ್ಯಗಳ ಪ್ರಸ್ತಾವನೆಯನ್ನೂ ಮಾಡಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕಿ ಶೃತಿ ನರಸಿಂಗಪ್ಪ ಹೊನ್ನಾಕಟ್ಟಿ ಮೂಲತಃ ವಿಜಯಪುರದವರು. ಡಿಪ್ಲೊಮಾ (ಸಿವಿಲ್) ಪದವೀಧರರು. ಸದ್ಯ, ಬೆಂಗಳೂರಿನ ಡಿ ಎಸ್ ಎ ಟಿ ಎಂ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ. ಓದು., ಚಿತ್ರಕಲೆ, ಬರಹ ಇವರ ಹವ್ಯಾಸಗಳು. ಕೃತಿಗಳು: ಕನ್ನಡ ಸಂಸ್ಕೃತಿ (ವೈಚಾರಿಕ ಲೇಖನಗಳು) ...
READ MORE