ಪುಟಗಳ ನಡುವಿನ ನವಿಲುಗರಿ

Author : ಕುಸುಮಾ ಶಾನುಭಾಗ

Pages 168

₹ 130.00




Year of Publication: 2013
Published by: ಅಂಕಿತ ಪುಸ್ತಕ
Address: 53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 26617100

Synopsys

‘ಪುಟಗಳ ನಡುವಿನ ನವಿಲುಗರಿ’ ಲೇಖಕಿ ಕುಸುಮಾ ಶಾನಭಾಗ ಅವರ ಸಾಮಾಜಿಕ ಚಿಂತನೆಯ ಬರಹಗಳ ಸಂಕಲನ. ಇಲ್ಲಿ ಹದಿನಾರಕ್ಕೆ ಅಭಿ ಎರಡು ಮಕ್ಕಳ ತಾಯಿ, ಎಲ್ಲಿ ಹೋದರು ಈ ಬಾಲೆಯರು, ಉಪಕಾರ ಎಂಬ ಸಿಹಿಗೆ ಮುತ್ತುವ, ಮಣ್ಣಿನ ಮಗಳ ಕೊನೆಯ ದಿನಗಳು, ಪ್ರೊಮಿಮಾ ಬೇಡಿಯ ಸೆಳೆತಕೆ ಒಲಿದ ದನಗಾಹಿ, ಕೊಡಗಿನ ಬಡ ರೋಗಿಗಳಿಗೆ ಮರುಗಿದ ಗ್ರೀಕ್ ಮಹಿಳೆ, ಮುಂಜಾವಿನ ಮಂಜಿನಲ್ಲಿ, ಅವರಿಗೆ ಎಲ್ಲರೂ ಇದ್ದರೂ ಯಾರೂ ಇರಲಿಲ್ಲ, ಫುಟ್ ಪಾತಿನ ಸಂಸಾರ, ಹೊಟ್ಟೆ ಹಸಿವೆಗೆ ಉರುಳು ಮದ್ದು, ಬಹಿಷ್ಕಾರ-ಶಿರಸ್ಕಾರಗಳೇಕೆ, ಹೇರಿಕೊಂಡರೆ ಹೊರೆ, ಮುಸುಕಿದ ಮಬ್ಬಿನಲಿ ಬೆಳಕ ಹುಡುಕಿ ಸೇರಿದಂತೆ 29 ಲೇಖನಗಳು ಇಲ್ಲಿ ಸಂಕಲನಗೊಂಡಿವೆ.

About the Author

ಕುಸುಮಾ ಶಾನುಭಾಗ

ಕನ್ನಡದ ಅತ್ಯತ್ತಮ ಸ್ತ್ರೀ ಚಿಂತಕಿ, ಬರಹಗಾರ್ತಿಯರಲ್ಲಿ ಒಬ್ಬರು ಕುಸುಮಾ ಶಾನಭಾಗ. ಪತ್ರಕರ್ತೆ, ಬರಹಗಾರ್ತಿ ಅವರು ಮೂಲತಃ ಕೊಡಗಿನವರು. ಪ್ರಜಾವಾಣಿ ದಿನಪತ್ರಿಕೆ ಉದ್ಯೋಗಿಯಾಗಿ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದಿರುವ ಇವರು ಲೈಂಗಿಕ ಕಾರ್ಯಕರ್ತರ ಕುರಿತು ಸುಮಾರು ಹತ್ತು ವರ್ಷಗಳಿಗೂ ಹೆಚ್ಚುಕಾಲ ಅಧ್ಯಯನ ನಡೆಸಿದ್ದಾರೆ. “ನೆನಪುಗಳ ಬೆನ್ನೇರಿ”ಎಂಬ ಕಥಾಸಂಕಲನವನ್ನು ಹೊರತಂದಿದ್ದಾರೆ. ನವಕರ್ನಾಟಕ ಪ್ರಕಾಶನದ ವನಿತಾ ಚಿಂತನ ಮಾಲೆಯಿಂದ ಹೊರಬಂದ ಕುಸುಮಾ ಶಾನುಭಾಗರ ’ಮಣ್ಣಿಂದ ಎದ್ದವರು’ ಎಂಬ ವಿಶಿಷ್ಟ ಕಾದಂಬರಿ , ಸ್ತ್ರೀ ಸಮುದಾಯದ ಒಳಕಾಳಜಿಗಳ ಒಟ್ಟಾರೆ ಆಳ ಮತ್ತು ಅಗಲವನ್ನು ತೆರೆದಿಡುವ ಕೌಟುಂಬಿಕ ವಿಸ್ತಾರದ ಸುದೀರ್ಘ ಬರವಣಿಗೆಯ ತಾಜಾ ಕೃತಿಯಾಗಿದೆ. ...

READ MORE

Related Books