ಹಿರಿಯ ಸಾಹಿತಿ ಹಾಗೂ ವಿಚಾರವಾದಿ ಡಾ. ಮೋಗಳ್ಳಿ ಗಣೇಶ್ ಅವರು ರಚಿಸಿರುವ ಕೃತಿ ‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’.
ತಮ್ಮ ಅಗಾಧ ಪ್ರತಿಭೆ, ದಲಿತ ಚಿಂತನೆಗಳ ಮೂಲಕ ನಾಡಿನ ಪ್ರಜ್ಞಾವಲಯವನ್ನು ವಿಸ್ತರಿಸುತ್ತಿರುವ ಮಹತ್ವದ ಲೇಖಕ, ಕನ್ನಡದ ಕಥಾಲೋಕವನ್ನು ಶ್ರೀಮಂತಗೊಳಿಸಿದ ಕಥೆಗಾರರಾದ ಮೊಗಳ್ಳಿ ಗಣೇಶ್ , ಮಹತ್ವದ ಚಿಂತಕ ಅಂಬೇಡ್ಕರ್ ಎಂಬ ಮಹಾನದಿಯನ್ನೂ, ಗಾಂಧೀಜಿಯೆಂಬ ನದಿಯನ್ನು ಏಕಕಾಲಕ್ಕೆ ಗ್ರಹಿಸಿ ಈ ಕೃತಿಯ ಮೂಲಕ ತಮ್ಮ ಚಿಂತನೆಗೆಳನ್ನು ಬಿತ್ತರಿಸಿದ್ದಾರೆ.
ಪ್ರಗತಿಪರರು, ಚಿಂತಕರು, ಗಾಂಧಿ ಮತ್ತು ಅಂಬೇಡ್ಕರ್ನ್ನು ಒಂದುಗೂಡಿಸುವ ಚಿಂತನೆ ಹೊಂದಿದ್ದಾರೆ. ಇಬ್ಬರು ನಾಯಕರ ವೈಚಾರಿಕ ಚಿಂತನೆಗಳನ್ನು ಅಧ್ಯಯನ ಮಾಡಿ ಪ್ರಜ್ಞಾಪೂರಕವಾಗಿ, ಲೋಕಗ್ರಹಿಕೆಯ ಮೂಲಕ ಅನುಭವದಿಂದ ಬಂದ ಬರಹವನ್ನು ಈ ಕೃತಿಯಲ್ಲಿ ಕಾಣಬಹುದು. ಅಂಬೇಡ್ಕರ್ ಎಂಬ ಮಹಾ ನದಿಯಲ್ಲಿ ಹಿಂದುತ್ವದ ಪಾಪ ಅಳೆದು, ಮಾನವತೆಯ ಬೇರೆಗಳು ಗಟ್ಟಿಯಾಗಿವೆ. ಅಂಬೇಡ್ಕರ್ ಮತ್ತು ಗಾಂಧಿ ಸಂಬಂಧ ದೇಹ ಮತ್ತು ಆತ್ಮದಂತೆ ಇದೆ. ಗಾಂಧಿ ಭಾರತದ ದೇಹವಾದರೆ, ಅಂಬೇಡ್ಕರ್ ದೇಶದ ಆತ್ಮದಂತೆ. ಎನ್ನುವ ವೈಚಾರಿಕ ನಿಲುವುಗಳ ಕೃತಿಯಾಗಿ ’‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’ ಪ್ರಕಟವಾಗಿದೆ.
©2024 Book Brahma Private Limited.