ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರ ಕೃತಿ-ರೈತ ಚಳವಳಿ: ಚಿಂತನೆ. ಕರ್ನಾಟಕದ ರಾಜ್ಯದಲ್ಲಿ ರೈತ ಚಳವಳಿಗಿಂತ ಮೊದಲು ಅಂದರೆ 10 ವರ್ಷಗಳ ಮುಂಚೆಯೇ ದಲಿತ ಚಳವಳಿ ಹುಟ್ಟಿಕೊಂಡಿತ್ತು. 10 ವರ್ಷಗಳ ತನಕ ತನ್ನ ಕಾವು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಆದರೆ, 1980 ಆರಂಭಕ್ಕೆ ರೈತ ಚಳವಳಿ ಹುಟ್ಟಿಕೊಂಡರೂ 10 ವರ್ಷಕ್ಕೂ ಮೊದಲೇ ತನ್ನ ಕಾವು ತಣ್ಣಗಾಗಿಸಿಕೊಂಡಿತ್ತು. ದಲಿತ ಚಳವಳಿಯಲ್ಲಿರುವಂತೆ ರೈತ ಚಳವಳಿಯಲ್ಲಿ ಸೂಕ್ತ ನಾಯಕರ ಅಭಾವ ತಲೆದೋರಿತು. ಚಳವಳಿ ಮುಂದುವರಿಯಲಿಲ್ಲ. ಚಳವಳಿಯ ಯಶಸ್ವಿಗೆ ಎಲ್ಲ ದುಡಿಯುವ ವರ್ಗದ ಜನತೆಯನ್ನು ಕರೆದೊಯ್ಯುವುದು ಮುಖ್ಯ ಎಂಬ ವಿಚಾರ ಮುಖ್ಯ. ಇಂತಹ ಸಂಗತಿಗಳ ವಿಶ್ಲೇಷಣೆಯೇ ಈ ಕೃತಿ.
ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...
READ MORE