ಚಿಂಚೋಳಿ ತಾಲೂಕಿನ ಕೊಂಚವರಂ ಸುತ್ತಲಿನ ತಾಂಡಾಗಳಲ್ಲಿ ಮಕ್ಕಳ ಮಾರಾಟದ ಮುಂದುವರೆದ ಭಾಗವಾಗಿ ಮಕ್ಕಳ ಬಾಯಲ್ಲಿ ಹತ್ತಿ ಅರಳೆ ಇಟ್ಟು ಹಾಲುಣ್ಣಿಸಿ ಉಸಿರುಗಟ್ಟಿಸಿ ಹೆಣ್ಗೂಸುಗಳನ್ನು ಸಾಯಿಸುತ್ತಿದ್ದ ಪ್ರಕರಣ ಇಡೀ ಮನುಕುಲವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು. ಮಕ್ಕಳ ಮಾರಾಟಕ್ಕೆ ಕಡಿವಾಣ ಹಾಕಲು ಸರ್ಕಾರ ಒಂದು ಕಡೆ ಹೆಣಗಾಡುತ್ತಿದ್ದರೆ, ಹುಟ್ಟಿದ ಹೆಣ್ಗೂಸುಗಳನ್ನು ಹೇಗೆ ತಮ್ಮಿಂದ ದೂರ ಮಾಡಿಕೊಳ್ಳಬೇಕೆಂಬ ಆಲೋಚನೆಯಲ್ಲಿ ತಾಂಡಾದವರು ತೊಡಗಿಕೊಂಡ ಫಲ ಎಂಬಂತೆ ಬೇಡವಾದ ಹೆಣ್ಣು ಮಕ್ಕಳನ್ನು ಸದ್ದಿಲ್ಲದ ಸಾಯಿಸುವ ಪ್ರಕ್ರಿಯೆ. ಈ ಸುದ್ದಿ ಕೇಳಿದಾಗ ನಾವು ಯಾವ ಕಾಲದಲ್ಲಿದ್ದೇವೆ ಎಂದು ಪ್ರಶ್ನೆ ಮೂಡೋದು ಸರಜ. ಹೀಗೆ ಮನುಕುಲವನ್ನೇ ಬೆಚ್ಚಿಬೀಳಿಸುವಂತೆ ಮಾಡಿದ ಹೆಣ್ಗೂಸುಗಳ ಕೊಲೆಯನ್ನು ಬಿಂಬಿಸುವ ಪ್ರಬಂಧ ಅಮ್ಮಾ ಕೊಲ್ಬ್ಯಾಡ. ಅಮ್ಮಾ ಕೊಲ್ಬ್ಯಾಡ ಪ್ರಬಂಧದ ಜೊತೆಗೆ ಹಲವಾರು ಲಲಿತ ಪ್ರಬಂಧಗಳಿವೆ. ಮಕ್ಕಳು ಬೇಕೆ ಮಕ್ಕಳು ಮತ್ತು ಗಂಡಂದಿರಿಗೆ ಜೈಹೋ ಕೃತಿಗಳ ಮುಂದುವರೆದ ಭಾಗ ಎಂದರೂ ತಪ್ಪಾಗಲಿಕ್ಕಿಲ್ಲ.
ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಶಿವರಾಮ ಅಸುಂಡಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಅಸುಂಡಿ ಗ್ರಾಮದವರು. ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ಆರಂಭಿಸಿ ಮಾಧ್ಯಮದೊಂದಿಗೆ ನಂಟು ಬೆಳೆಸಿಕೊಂಡರು. ಎಂ.ಎ., ಎಂ.ಫಿಲ್., ಪಿಎಚ್.ಡಿ. ಪದವಿ ಪಡೆದಿರುವ ಅವರು ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗಲೇ ಮಾಧ್ಯಮ ಕ್ಷೇತ್ರ ಪ್ರವೇಶಿಸಿದರು. ಬಳ್ಳಾರಿಯ ’ಈ ನಮ್ಮ ಕನ್ನಡ ನಾಡು’ ದೈನಿಕದಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ .ಟಿ.ವಿ.ಗೆ ಸೇರಿ ಹಾವೇರಿಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದರು. 2004ರಿಂದ ಕಲಬುರಗಿಯಲ್ಲಿ ಈಟಿವಿ ಪ್ರತಿನಿಧಿಯಾಗಿದ್ದಾರೆ. ’ದು.ನಿಂ.ಬೆಳಗಲಿ ಅವರ ದೇವದಾಸಿ’ ಕಾದಂಬರಿ ಕುರಿತು ಎಂ.ಫಿಲ್. ಪದವಿ ಮಾಡಿರುವ ಅಸುಂಡಿ ಅವರು ಡಾ.ಮಲ್ಲಿಕಾ ಘಂಟಿ ಮಾರ್ಗದರ್ಶನದಲ್ಲಿ ’ದಲಿತ ...
READ MORE