ಸಂಸ್ಕೃತಿ ಸಂಶೋಧಕ ಶಂ.ಬಾ. ಜೋಶಿ ಅವರು ಬರೆದ ಯಕ್ಷಪ್ರಶ್ನೆ ಕೃತಿಯು, ಮಹಾಭಾರತದ ಯಕ್ಷಪ್ರಶ್ನೆಯ ಪ್ರಸಂಗದ ಹಿನ್ನೆಲೆಯಲ್ಲಿ ಸ್ವಾತಂತ್ಯ್ರನಂತರದ ಭಾರತದ ಸ್ಥಿತಿ-ಗತಿಗಳನ್ನು ಮತ್ತು ಭವಿಷ್ಯತ್ತನ್ನುಹಾಗೂ ಮುಂಬರುವ ಸಮಾಜವನ್ನು ವಿಶ್ಲೇಷಿಸುತ್ತದೆ. ತನ್ನ ಪ್ರಶ್ನೆಗಳಿಗೆ ಉತ್ತರಿಸಿದೇ ನೀರು ಕುಡಿಯುವವರು ಯಾರೂ ಬದುಕುವುದಿಲ್ಲ ಎಂಬ ಯಕ್ಷನ ಎಚ್ಚರಿಕೆಗೆ ಧರ್ಮರಾಜ ಹೊರತುಪಡಿಸಿ ಉಳಿದೆಲ್ಲ ಪಾಂಡವರು ಸತ್ತು ಬಿದ್ದಿರುತ್ತಾರೆ. ಯಕ್ಷನ ಪ್ರಶ್ನೆಗಳಿಗೆಲ್ಲ ಧರ್ಮರಾಯ ಉತ್ತರ ಹೇಳುತ್ತಾನೆ. ಅದು ಮಹಾಭಾರತ. ಆದರೆ, ಸ್ವಾತಂತ್ಯ್ರನಂತರ ಜಾತಿ-ಧರ್ಮ ಸೇರಿದಂತೆ ಹತ್ತು ಹಲವು ಪ್ರಶ್ನೆಗಳಿವೆ. ಅದಕ್ಕೆ ಉತ್ತರಿಸಬೇಕಾದ ಅನಿವಾರ್ಯತೆ ಇದೆ ಎಂಬ ವಿಚಾರದ ಹಿನ್ನೆಲೆಯಲ್ಲಿ ಇಲ್ಲಿಯ ಅಧ್ಯಾಯಗಳು ರೂಪುಗೊಂಡಿವೆ.
ಜಾತಿಯತೆಯ ಹಿನ್ನೆಲೆ, ರಾಷ್ಟ್ರೀಯ ಸೈನ್ಯವನ್ನು ನಿರ್ಮಾಣ ಮಾಡಬಲ್ಲೆವೆ?, ನಮಗೆ ಬೇಕಾದದು ಏನು ಜಾತಿಯೇ? ಪ್ರಜಾಪ್ರಭುತ್ವವೆ?, ಹಿಂದೂ ಎಂಬ ಸಮಾಜ ಇದೆಯೇ? ಆಗಬೇಕೆ?, ಮುಸಲ್ಮಾನರ ತೊಡಕು, ಜ್ಞಾನ ಅಥವಾ ಹಿರಿಮೆ ಜ್ಞಾನವನ್ನವಲಂಬಿಸಿದೆಯೇ?, ಅಡುಗೆಯವಳಾಗುವುದೇ ಹೆಣ್ಣಿನ ಜೀವನದ ಹೆಗ್ಗುರಿಯೆ?, ಹೆಣ್ಣಿನ ವ್ಯಕ್ತಿತ್ವದ ವಿಕಾಸವು ತಾಯ್ತನದಲ್ಲಿದೆ, ಮದುವೆಗಳ ವಿಚಾರ, ಸಂಕ್ರಮಣ ಹೀಗೆ ವಿವಿಧ ಆಧ್ಯಾಯಗಳ ಮೂಲಕ ಯಕ್ಷಪ್ರಶ್ನೆಗಳನ್ನು ಹಾಕಿಕೊಳ್ಳುತ್ತಲೇ ಉತ್ತರ ಕಂಡುಕೊಳ್ಳಲು ಬಯಸುವ ಕೃತಿ ಇದು. ಹತ್ತು ಹಲವು ಚಿಂತನೆಗಳ ಪ್ರೇರಕವಾಗಿದೆ.
©2024 Book Brahma Private Limited.