ಸಂತೆಯೊಳಗೊಂದು ಮನೆ

Author : ಬಿ. ಯು. ಸುಮಾ

Pages 180

₹ 140.00




Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

’ಸಂತೆಯೊಳಗೊಂದು ಮನೆ’  ಲೇಖಕಿ ಬಿ. ಯು ಸುಮಾ ಅವರ ಕೃತಿ. 

ಹಲವು ಐಡೆಂಟಿಟಿಗಳನ್ನು ಏಕಕಾಲದಲ್ಲಿ ನಿಭಾಯಿಸುವುದು ಇಂದಿನ ಕಾಲದ ಲೇಖಕಿಯರಿಗೆ ಇರುವ ದೊಡ್ಡ ಸವಾಲು, ಮಹಿಳೆಯರು, ಕೇವಲ ಮಹಿಳಾಸಾಹಿತ್ಯದ ಕಷ್ಟ-ಕಾರ್ಪಣ್ಯಗಳ ಕಡೆಗೆ ಸಂಪೂರ್ಣವಾದ ಗಮನಕೊಟ್ಟು, ಉಳಿದುದೆಲ್ಲವನ್ನೂ ಹೊರಗಿನದು' ಎಂದು ನೋಡುವುದು ಹಾಗೂ  ಅದು ಅವರವರ ಆಯ್ಕೆ ಮತ್ತು ಆಧ್ಯತೆಗಳ ಮಾತಾಗಿದೆ ಎನ್ನಬಹುದು. 

ಗಂಭೀರವಾದ ಸಂಸ್ಕೃತಿ ಸಾಹಿತ್ಯಗಳ ವಿಷಯ ಪ್ರಸ್ತಾಪವನ್ನು ವಿದ್ಯಾರ್ಥಿಯ ಪಾತ್ರಗಳನ್ನು ಸುಮಾ ಅವರು ಬಹಳ,  ಚೆನ್ನಾಗಿ ಕಾಪಾಡಿಕೊಂಡಿದ್ದಾರೆ. ಅವುಗಳ ನಡುವೆ ಒಡಕುಗಳು ಇವೆ ಎನ್ನಿಸಿದಾಗ ಅವರ ಆಯ್ಕೆಗಳು ಸಂದರ್ಭಕ್ಕೆ ಹೊಂದಿಕೊಳ್ಳುವಂತೆ ಇರುತ್ತವೆ ಮತ್ತು ಬಹಳ ಪ್ರಾಮಾಣಿಕವಾಗಿರುತ್ತವೆ ಎಂಬುದನ್ನು ಇವರ ’ಸಂತೆಯೊಳಗೊಂದು ಮನೆ’ ಕೃತಿಯ ಮೂಲಕ ಕಾಣಬಹುದು. 

About the Author

ಬಿ. ಯು. ಸುಮಾ
(07 November 1967)

ಬೆಂಗಳೂರಿನಲ್ಲಿ 1967ರ ನವೆಂಬರ್ 7 ರಂದು ಜನಿಸಿದ ಸುಮಾ ಅವರು ಮೂಲತಃ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಭೂಪಸಂದ್ರದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ (1990 ಕನ್ನಡ ಎಂ.ಎ.) ಪಡೆದು, 1992 ರಲ್ಲಿ ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಕಣ ಇಲಾಖೆಗೆ ಉಪನ್ಯಾಸಕರಾಗಿ ನೇಮಕ ಹೊಂದಿದರು. 2007ರಲ್ಲಿ 'ಕನ್ನಡ ಸಾಹಿತ್ಯ ಪ್ರತಿಭೆ ಮತ್ತು ಪ್ರಭುತ್ವ : 1600-1900' ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದರು. ಬೆಂಗಳೂರಿನ ವಿಜಯನಗರ ಬಡಾವಣೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2008ರಲ್ಲಿ ಇವರು ಸಂಪಾದಿಸಿದ 'ಡಾ.ಬಿ.ಆರ್.ಅಂಬೇಡ್ಕರ್ -ವರ್ತಮಾನದೊಂದಿಗೆ ...

READ MORE

Related Books