‘ಎಲ್ಲಾ ಮಾಯವೋ’ ಇದು ಪವಾಡ ಬಯಲು ತಜ್ಞ ಡಾ. ಹುಲಿಕಲ್ ನಟರಾಜು ಅವರು ರಚಿಸಿರುವ ಕೃತಿ. ಇಲ್ಲಿ ಪವಾಡ ವಾಮಾಚಾರ, ಬಾನಾಮತಿ ಕುರಿತ ನೈಜ ಪ್ರಕರಣಗಳ ಮಾಹಿತಿಗಳಿವೆ. ಒಳಪುಟಗಳಲ್ಲಿ ದೆವ್ವದ ಬೇಟೆ, ಸ್ವಯಂ ಚಲನೆ, ನಡುಗುವ ಮಂಚ, ಸ್ವಯಂ ಆನ್-ಆಫ್ ಆಗುವ ಕಂಪ್ಯೂಟರ್ ಗಳು, ಡ್ರೈವರ್ ಗೆ ಕಾಣಿಸಿದ ದೆವ್ವ, ಅಜ್ಜಿ ಮಾಟದ ಕುಡಿಕೆ, ಸಮಾಧಿಯತ್ತ ಸಾಗುವ ದೈನ್ಯ ಕೂಗು, ಚಿನ್ನ ದುಪ್ಪಟ್ಟು ಮಾಡುವ ಸ್ವಾಮೀಜಿ, ಢೋಂಗಿ ಸ್ವಾಮಿ ದುರ್ವರ್ತನೆ, ಅರಿಶಿನ ಹಚ್ಚಿದರೆ ಮಕ್ಕಳಾಗುವುದೇ, ನಿಧಿಗಾಗಿ ಹತ್ಯೆ, ಬೆಳಕಿನ ಆಟ, ವಿಗ್ರಹ ಅಪ್ಪಿಕೊಂಡರೆ ಮಕ್ಕಳಭಾಗ್ಯ, ರೈಸ್ ಪುಲ್ಲಿಂಗ್, ಬಾವಿಯಲ್ಲಿ ದೇವರು, ಆತ್ಮಗಳಿಂದ ಹೆದ್ದಾರಿಯಲ್ಲಿ ಅಪಘಾತ, ಶ್ರೀಮಂತ ಮಹಿಳಾ ಭಿಕ್ಷುಕಿ, ಅಪಘಾತಕ್ಕೆ ಅಜ್ಜಿ ಕಾರಣ, ವಿಕೃತ ಮನಸ್ಸಿನ ಉಮೇಶ, ನವದ್ವಾರದಲ್ಲಿ ರಕ್ತಸ್ರಾವ, ನಿಧಿಯ ಆಮಿಷ, ಸಾಲದ ವಶ, ದೆವ್ವ ಮೈಮೇಲೆ ಬಂದಾಗ, ಆತಂಕ ಸೃಷ್ಟಿಸಿದ ಹಾರ್ನ್ ಸ್ಪಾಟ್, ಹೆಗಲೇರಿದ ಶನಿ, ಮನೆಯ ಮೇಲೆ ಕಲ್ಲು, ದಿಢೀರ್ ಬೆಂಕಿ ಜ್ವಾಲೆ, ನಿಗೂಧ ಬೆಂಕಿ, ವಿಭೂತಿ ಮನುಷ್ಯ, ಅನುಮಾನದಿಂದ ಬಂದ ಸಂಕಟ, ವಿಚಿತ್ರ ನಡವಳಿಕೆ, ದೆವ್ವರು ಭಯ, ಘೀಳಿಡುವ ಸತ್ತ ಆನೆಗಳು, ದೇವರ ಆಟ, ಆಹಾರದಲ್ಲಿ ವಿಷ, ಹುಡುಗನ ಕಿತಾಪತಿ, ವಿದೇಶಿ ಮೌಲ್ಯದಿಂದ ಸಂಕಷ್ಟ, ಮೈಮೇಲೆ ದೇವಿ ಆವಾಹನೆ, ಮಕ್ಕಳ ನಿಯಂತ್ರಣವಿಲ್ಲದಿದ್ದರೆ, ಬೆತ್ತಲೆ ಬೇಟೆ, ಮನೆಯೊಳಗಿನ ಕಳ್ಳ, ನಗುಮೊಗದ ಹುಡುಗಿಗೆ ಹೊಟ್ಟೆನೋವು, ಅಗೋಚರ ವ್ಯಕ್ತಿಗಳ ಭಯ, ಮಿಡ್ ಬ್ರೈನ್ ಟ್ರೈನಿಂಗ್, ಕಾಗದ ಅಂಟಿಸುವ ಕಾಯಿಲೆ, ಕತ್ತಲೆಯ ಭಯ, ಸದಾ ನಿಂತಿರುವ ಹೆಂಗಸು, ದಾರಿ ತಪ್ಪಿದ ಮಗ, ಬಯಕೆ ಈಡೇರಿಸುವ ವಿಗ್ರಹ, ಮನೆಯ ಮೇಲೆ ಸದ್ದು, ಮಂಜುಗಡ್ಡೆ ಮಹಿಮೆ ಎಂಬ ಲೇಖನಗಳು ಸಂಕಲನಗೊಂಡಿವೆ.
©2024 Book Brahma Private Limited.