‘ನಾವು ನಮ್ಮ ನುಡಿ’ ಮೇಟಿ ಮಲ್ಲಿಕಾರ್ಜುನ ಅವರ ಕೃತಿಯಾಗಿದೆ. ಇದಕ್ಕೆ ಬಿ. ಎಲ್. ರಾಜು ಅವರ ಬೆನ್ನುಡಿ ಬರಹವಿದೆ; ನಮ್ಮ ಬದುಕಿನ ಸಂದರ್ಭದಲ್ಲಿ ಕಗ್ಗಂಟಾಗುತ್ತಲೇ ನಡೆದಿರುವ ಶಿಕ್ಷಣದ ದಾರಿ, ಗುರಿ ಮತ್ತು ಅದು ಉಂಟುಮಾಡುತ್ತಿರುವ ಪಲ್ಲಟಗಳು ಹಾಗೂ ಹೊಸ ಶಿಕ್ಷಣ ನೀತಿಗಳನ್ನು ಈ ಕೃತಿಯ ಮೊದಲ ಭಾಗದಲ್ಲಿ ಚರ್ಚಿಸಲಾಗಿದೆ. ಭಾರತದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡ ನುಡಿಯ ಸಾಮಾಜಿಕ ಅಸ್ಮಿತೆ ಮತ್ತು ವೈವಿಧ್ಯತೆ ಅದರ ಸಮಕಾಲೀನತೆ ಮತ್ತು ಸಬಾಲ್ಟರ್ನಿಟಗಳನ್ನು ಕುರಿತ ಖಚಿತವಾದ ಒಳನೋಟಗಳು ಎರಡನೇ ಭಾಗದಲ್ಲಿವೆ. ಅಂಬೇಡ್ಕರ್ ಮತ್ತು ಗಾಂಧಿ ಎಂಬ ಚೇತನಗಳು ಕಳೆದ ಶತಮಾನದ ಭಾರತವನ್ನು ಪ್ರಭಾವಿಸಿದ ಬಗೆ, ಅವರು ಮುಖಾಮುಖಿಯಾದ ರಾಜಕಾರಣ ಮತ್ತು ಪರ್ಯಾಯವಾಗಿ ಕಟ್ಟಿಕೊಟ್ಟ ದರ್ಶನ ಇತ್ಯಾದಿಗಳನ್ನು ಈ ಕೃತಿಯ ಮೂರನೇ ಭಾಗದಲ್ಲಿ ಧ್ಯಾನಿಸಲಾಗಿದೆ. ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟುಗಳ ಹಿಂದಿರುವ ರಾಜಕಾರಣದ ಆಳ ಅಗಲಗಳನ್ನು ಚರ್ಚಿಸುವ ಮಲ್ಲಿಕಾರ್ಜುನ ಮೇಟಿಯವರ ಈ ಕೃತಿಯು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಓದಿಗೆ ಒಂದು ವಿಶಿಷ್ಟ ಬಗೆಯ ಪ್ರವೇಶವನ್ನು ಮತ್ತು ಕನ್ನಡದ ತಿಳಿವಿಗೇ ಒಂದು ಓಟವನ್ನು ದೊರಕಿಸುತ್ತದೆ.
ಟಿ
©2024 Book Brahma Private Limited.