ಹಿರಿಯ ಪ್ರವಚನಕಾರ, ಚಿಂತಕ ಡಾ. ಪಾವಗಡ ಪ್ರಕಾಶರಾವ್ ಅವರ ಕೃತಿ-ಭಾವ ಪ್ರಕಾಶ. ಕನ್ನಡ ಸಂಸ್ಕೃತಿ, ಚರಿತ್ರೆ ಕುರಿತಂತೆ ವಿಚಾರಪೂರ್ಣ ಬರಹಗಳು ಇಲ್ಲಿ ಸಂಕಲನಗೊಂಡಿವೆ. ಕನ್ನಡ ಒಂದು ಭಾಷೆಯಾಗಿ, ಸಂಸ್ಕೃತಿಯಾಗಿ ಮತ್ತು ಚರಿತ್ರೆಯ ಭಾಗವಾಗಿಯೂ ಹೇಗೆ ಕನ್ನಡಿಗರು, ಕನ್ನಡತನ ಹಾಗೂ ಕರ್ನಾಟಕವನ್ನು ಆವರಿಸಿದೆ ಎಂಬ ಬಗ್ಗೆ ತಮ್ಮದೇ ಆದ ಧಾಟಿಯಲ್ಲಿ ವಿಚಾರಗಳನ್ನು ಮಂಡಿಸಿದ್ದೇ ಈ ಕೃತಿ. ಸರಳ ಭಾಷೆ, ಉನ್ನತ ವಿಚಾರ, ಪೂರ್ವಗ್ರಹವಿರದ ವಿಷಯ ಮಂಡನೆ, ನಿರೂಪಣಾ ಶೈಲಿ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕೃತಿಯು ಓದುಗರ ಗಮನ ಸೆಳೆಯುತ್ತದೆ.
ಖ್ಯಾತ ಪ್ರವಚನಾಕಾರ ಪಾವಗಡ ಪ್ರಕಾಶರಾವ್ ಅವರು ಮೂಲತಃ ತುಮಕೂರು ಜಿಲ್ಲೆಯ ಪಾವಗಡದವರು. ಎಂ.ಎ. ಹಾಗೂ ಕಾನೂನು ಪದವೀಧರರು. ಬೆಂಗಳೂರಿನ ಎಸ್.ಎಸ್.ಎಂ.ಆರ್ ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಿದ್ದರು. ದೂರದರ್ಶನ ಚಂದನ ವಾಹಿನಿಯಲ್ಲಿ ಸುಮಾರು 12 ವರ್ಷಗಳವರೆಗೆ ‘ಸತ್ಯದರ್ಶನ’ ಎಂಬ ಕಾರ್ಯಕ್ರಮದಡಿ ಧಾರ್ಮಿಕ ಪ್ರವಚನ ನೀಡುತ್ತಾ ಬಂದಿದ್ದು ಸುಮಾರು 1008ಕ್ಕೂ ಅಧಿಕ ಎಪಿಸೋಡುಗಳನ್ನು ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮಹಾಭಾರತದ ಭಗವದ್ ದರ್ಶನ, ರಾಮಾಯಣ, ವೇದ, ಉಪನಿಷತ್ ಕುರಿತು ಪ್ರವಚನ ತಮ್ಮದೇ ಆದ ರೀತಿಯಲ್ಲಿ ಸರಳವಾಗಿ ವಿವರಿಸುವ ಕಲೆಗಾರಿಕೆ ಸಿದ್ಧಿಸಿದೆ. 'ಅದ್ವೈತ ಸಿದ್ಧಾಂತ'ದ, ಶಂಕರ ಭಗವತ್ಪಾದರ ಜೀವನಾದರ್ಶಗಳಿಂದ ಪ್ರಭಾವಿತರು. ಭಾಗವತ ಪದ್ಯಾನುವಾದ, ಪತಂಜಲಿ ಮಹರ್ಷಿಗಳ ಯೋಗ ಸೂತ್ರ, ಕುಮಾರ ...
READ MORE