ಅಗಾಧ ಜ್ಞಾನದ ನಡುವೆಯೂ ಬಿ.ಸಿ. ದೇಸಾಯಿಯವರು ಬರೆದದ್ದು ಕಡಿಮೆ. ಆದರೂ ಅವರ ಚಿಂತನೆಗಳು ಇಂದಿನ ಸಮಾಜಕ್ಕೆ ಪ್ರಸ್ತುತ. ಅವರ ಲೇಖನಗಳನ್ನು ಗಮನಿಸಿದಾಗ, ದಲಿತ ಮತ್ತು ಶೂದ್ರಪ್ಞಜ್ಞೆ, ಭಾಷಾ ಚಳುವಳಿಗಳ ಬಗ್ಗೆ ಅವರಿಗಿದ್ದ ಕಾಳಜಿ ಅರ್ಥವಾಗುತ್ತದೆ.
ದೇಸಾಯಿ ಅವರ ಒಟ್ಟಾರೆ ಬದುಕಿನ ಹೋರಾಟ, ಸಾಹಿತ್ಯದ ಅಧ್ಯಯನ, ಜನಪರ ಹೋರಾಟ, ದಲಿತ ಪ್ರಜ್ಞೆಯ ಅರಿವು ಮೂಡಿಸುವ ಬರಹಗಳು ಸಹೃದಯ ಓದುಗರ ಮನಸ್ಸಿನಲ್ಲಿ ಅವರ ನಿಲುವುಗಳನ್ನು ಉಳಿಸಿಕೊಳ್ಳುವಂತೆ ಮಾಡುತ್ತದೆ ಈ ಕೃತಿ.
ಬಿ.ಸಿ.ದೇಸಾಯಿಯವರು ಕವಿಯಾಗಿ,ನಾಟಕಕಾರರಾಗಿ,ವಿಮರ್ಶಕರಾಗಿ ಸಾಹಿತ್ಯ ಕೃಷಿ ಮಾಡಿದವರು. ಮಾರ್ಕ್ಸ್‌ವಾದಿ ವಿಮರ್ಶೆಯನ್ನು ಎತ್ತಿ ಹಿಡಿದು ತಮ್ಮ ಅನಿಸಿಕೆ, ನಿಲುವುಗಳನ್ನು ತಳೆದಿದ್ದವರು. 1972 ರಲ್ಲಿ ಅವರ ಏಕೈಕ ಕವನ ಸಂಕಲನ ’ಹುಸಿ’ ಪ್ರಕಟವಾಗಿತ್ತು. ಇದು ನವ್ಯ ಕಾಲದ ಸಾಹಿತ್ಯ ಸೃಷ್ಠಿಗೆ ಸೇರಿ ದೇಸಾಯಿಯವರ ಸಾಹಿತ್ಯ ರಚನೆ ಪರಿಚಯವಾಯಿತು. ನಂತರ ಅವರ ’ಸಾವು ಮತ್ತು ಇತರ ಕತೆಗಳು’ ಅವರ ಕಥಾ ಸಂಕಲನ ಬೆಳಕಿಗೆ ಬಂದಿತು. ರುಜುವಾತು, ಶೂದ್ರ, ಸಂಕ್ರಮಣ, ಮುಂತಾದವುಗಳು ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳಾಗಿವೆ. ಅವರ ಇನ್ನೂ 27 ಅಪ್ರಕಟಿತ ಕವನಗಳ ಒಂದು ಸಂಕಲನ ಇನ್ನೂ ಬೆಳಕು ಕಾಣಬೇಕಿದೆ. ...
READ MORE