ಲೇಖಕ ಕೋರಗಲ್ ವಿರೂಪಾಕ್ಷಪ್ಪ ಅವರ ವಿಮರ್ಶೆ ಕೃತಿ ʻಶಬ್ದ ಸೋಪಾನʼ. ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠದ ಶೂನ್ಯಪೀಠಾಧ್ಯಕ್ಷರಾದ ಶಿವಮೂರ್ತಿ ಮುರುಘಾರಾಜೇಂದ್ರ ಶರಣರ ಎಂಟು ಲೇಖನ ಗ್ರಂಥಗಳ ವಿಮರ್ಶೆ ಈ ಕೃತಿ. ನಲವತ್ತಕ್ಕಿಂತಲೂ ಅಧಿಕ ಕೃತಿಗಳನ್ನು ರಚಿಸಿರುವ ಇವರು ಆ ಮೂಲಕ ಕವಿ, ವಚನಕಾರ, ನಾಟಕಕಾರ, ಚಿಂತಕ, ವಿಚಾರವಾದಿ ಎನ್ನುವುದನ್ನು ತೋರಿಸಿಕೊಟ್ಟವರು. ಅವುಗಳಲ್ಲಿ ʻಅರಿವಿನ ಗುರುʼ, ʻಅಂತರಾಳʼ, ʻನಿಜದುದಯʼ, ʻಚಿಂತನ ತರಂಗʼ, ʻನಿಮ್ಮೊಂದಿಗೆʼ, ʻನಮ್ಮ ಸುತ್ತʼ, ʻಸುಳಿಯೊಡೆದ ಬೆಳೆʼ ಮುಂತಾದ ಏಳು ಕೃತಿಗಳನ್ನು, ಜೊತೆಗೆ ವಿದೇಶ ಪ್ರವಾಸದ ʻಜಗವಸುತ್ತಿದೆʼ ಕೃತಿಗಳನ್ನು ಈ ಪುಸ್ತಕದಲ್ಲಿ ಪರಿಚಯಿಸಿದ್ದಾರೆ. ಅಲ್ಲದೆ, ಮುರುಘರಾಜೇಂದ್ರ ಅವರ ಚಿಂತನೆ-ವಿಚಾರಗಳ ಹಲವು ಆಯಾಮಗಳನ್ನೂ ಲೇಖಕರು ಇಲ್ಲಿ ತೋರಿಸಿಕೊಟ್ಟಿದ್ದಾರೆ. ಅವುಗಳಲ್ಲಿ ಸ್ತ್ರೀ ಸಮಾನತೆ, ಜಾತ್ಯಾತೀತ ಸಮಾಜ, ಬಸವತತ್ವಾನುಷ್ಠಾನ, ಪರಿಸರ ಜಾಗೃತಿ, ಶಿಕ್ಷಣ, ದಲಿತ ಕಾಳಜಿ ಹೀಗೆ ಶರಣರ ಎಲ್ಲಾ ವಿಚಾರಗಳು ಹಲವು ಧಾರೆಗಳಲ್ಲಿ ಕಾಣಬಹುದು.
ಹಿರಿಯ ಸಾಹಿತಿ ವಿರೂಪಾಕ್ಷಪ್ಪ ಕೋರಗಲ್ ಅವರು ಕೊಪ್ಪಳ ಜಿಲ್ಲೆಯ ವದಗನಹಾಳ ಗ್ರಾಮದವರು. ಅಪ್ಪಟ ಮೊಘಲಾಯಿಯ ಗ್ರಾಮೀಣ ಪ್ರತಿಭೆ. ಎರಡನೆಯ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡು, ತಂದೆಯ ಆಶ್ರಯದಲ್ಲಿ ಬೆಳೆದರು. ಗವಿಮಠದಲ್ಲಿ ಶಿಕ್ಷಣ ಪೂರೈಸಿ 30 ವರ್ಷಗಳಿಂದ ಜೈನ ಸಾಹಿತ್ಯದ ಬಗ್ಗೆ ಸಂಶೋಧನೆ ಮಾಡುತ್ತ ಬಂದಿದ್ದಾರೆ. ಓದುವಿಕೆ ಅವರ ಹವ್ಯಾಸ. ಸಣ್ಣ ಕತೆ ಅವರ ಆರಂಭದ ಸಾಹಿತ್ಯ ಪ್ರಕಾರ. ಕತೆ, ಪುರಾಣ ಕಾವ್ಯ ರಚನೆ, ಕಾದಂಬರಿ, ಮಕ್ಕಳ ಸಾಹಿತ್ಯ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಗಣಿತದ ಪ್ರಾಧ್ಯಾಪಕರಾಗಿ, ಗಣಿತದ ಸಂಶೋಧನೆಯನ್ನು ಕನ್ನಡದಲ್ಲಿ ಮಾಡಿದ್ದಾರೆ. ಕೃತಿಗಳು: ಮುತ್ತಿನ ಚಿಪ್ಪಿನ ಸೂತ್ರಗಳು, ಭೂ ಅಳತೆಯಕ್ಷೇತ್ರ ಗಣಿತ, ಕಾವೇರಿಯಿಂದ ಗೋದಾವರಿವರೆಗೆ, ರಾಜಾದಿತ್ಯ, ನಾಯಿ ...
READ MORE