ಕನ್ನಡ ಭಾಷೆಯ ಸೌಂದರ್ಯ, ಬಳುಕು, ಒನಪು, ಬೆಡಗುಗಳನ್ನು ಕಾಣಲು ತರೀಕೆರೆ ಬರಹಗಳನ್ನು ನೋಡಬೇಕು ಎಂಬುದು ಓದುಗ ವಲಯದಲ್ಲಿರುವ ಮಾತು. ಸಮಾಜದ ಬಗ್ಗೆ ರಹಮತ್ ತರೀಕೆರೆ ಅವರ ಚಿಂತನೆ ವಿಭನ್ನವಾದದು. ಈ ಕೃತಿಯಲ್ಲಿ ವ್ಯಕ್ತಿಚಿತ್ರಗಳಿವೆ, ಶ್ರದ್ದಾಂಜಲಿಗಳಿವೆ, ಪುಸ್ತಕ ವಿಮರ್ಶೆಗಳಿವೆ, ಸಣ್ಣಸಂಗತಿ ತಿರುಗಾಟದ ಅನುಭವಗಳಿವೆ. ಎಲ್ಲವನ್ನೂ ಸುಂದರವಾಗಿ ಬಿಡಿ ಬಿಡಿ ಚಿಂತನೆಗಳ ಮೂಲಕ ವಿವರಿಸಲಾಗಿದೆ. ಸಮಾನ್ಯ ಎನಿಸಿಕೊಂಡಿದ್ದನ್ನು ನೋಡುವುದು, ಅದರ ಬಗ್ಗೆ ಚಿಂತಿಸುವುದು ಸಹ ಮುಖ್ಯ, ಈ ರೀತಿಯ ಚಿಂತನೆಗಳ ಸಂಗ್ರಹವೇ ಈ ಪುಸ್ತಕ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...
READ MORE