ಲೇಖಕ ನಾಗೇಶ ಹೆಗಡೆ ಅವರ ಸಮಕಾಲೀನ ಸಮಾಜದ ವಿಜ್ಞಾನ ವಿದ್ಯಮಾನಗಳ ಲೇಖನ ಸಂಗ್ರಹ:ʻ ನಾಳೆಗಳ ಹಿಂದಿಕ್ಕಿ ನಾಗಾಲೋಟʼ. ಮೇಘಸ್ಫೋಟ ಎಂದರೇನು? ಇಳಿಯಲಿವೆ ಕೃಷಿರಂಗಕ್ಕೆ ರೋಬಾಟ್ ಗಳು; ನಿಮ್ಮ ಬಿಎಮ್ಐ ಕಂಡುಹಿಡಿಯುವುದು ಹೇಗೆ? ಬರಬಹುದು ಕುಲಾಂತರಿ ಸೂಪರ್ ವೃಕ್ಷಗಳು. ಕಕ್ಷಗೇರಿ ಸರ್ಕಸ್ ಮಾಡಿದ ಚೀನೀ ಶಿಕ್ಷಕಿ. ಹಸುವಿನ ಮಿದುಳಲ್ಲಿ ಕಂಪ್ಯೂಟರ್ ಬಿಲ್ಲೆ: ಹಾರುವ ತಟ್ಟೆಗಳಲ್ಲಿ ಬಿಸಿಯೂಟ ಕಳಿಸಬಹುದೆ? ಕಿಲ್ಲಿಂಗ್ ಕರ್ವ್ ಎಂದರೇನು? ಪ್ರೇಮಿಗಳ ಮಿದುಳಲ್ಲಿ ಯಾವ ಕೆಮಿಕಲ್ ಸ್ರವಿಸುತ್ತದೆ? ಫುಕುಶಿಮಾ ಸುತ್ತ ಅಂತರ್ಜಲಕ್ಕೆ ದಿಗ್ಭಂಧನ ಹಾಕಿದ್ದು ಹೇಗೆ? ರಾಷ್ಟ್ರಧ್ವಜದ ಮೇಲೆ ಕುಲಾಂತರಿ ಹತ್ತಿ ಕೂರಬೇಕೆ? ರಾಮಸಾರ್ ಕೆರೆಗಳು ನಮ್ಮಲ್ಲೇಕಿಲ್ಲ? ಮತ್ತೆ ಬರಲಿವೆ ಹಿಮಗಜಗಳು.. -ಇಂಥ ನೂರೊಂದು ಪ್ರಶ್ನೆಗಳಿಗೆ ಸ್ವಾರಸ್ಯಕರ ಉತ್ತರಗಳು ಇಲ್ಲಿವೆ. ವಿಜ್ಞಾನ, ತಂತ್ರಜ್ಞಾರ, ದಗಲ್ ಬಾಜಿ, ರಾಜಕಾರಣ, ಶಿಕ್ಷಣ ಹೀಗೆ ಎಲ್ಲವುಗಳ ರಸಪಾಕ ಈ ಕೃತಿ.
ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...
READ MORE