ಲೇಖಕ ನಾಗೇಶ ಹೆಗಡೆ, ಜಗತ್ತುನಾದ್ಯಂತ ತಲ್ಲಣಗಳನ್ನ ಸೃಷ್ಟಿಸಿದ್ದ ಹಲವಾರು ಗಾಳಿಸುದ್ದಿಗಳ ಹಿಂದಿನ ಉದ್ದೇಶವೇನೆಂಬುದನ್ನು ಅಧ್ಯಯನ ಮಾಡಿ ಹಲವಾರು ಸಂಶೋಧನೆಗಳನ್ನು ಅವುಗಳ ಹಿಂದಿನ ನಿಜಸ್ವರೂಪವನ್ನು ಬಯಲಿಗೆಳೆದ ಕೃತಿ: ʻಮತ್ತೆ ಮತ್ತೆ ಕೂಗುಮಾರಿʼ.
ʻ2012 ರಲ್ಲಿ ಪ್ರಳಯʼದ ಭೋಗಸ್ ಭಯ, ಜಿನಿವಾದ ಸುರಂಗದಲ್ಲಿ ಫಿಸಿಕ್ಸ್ ಪ್ರಯೋಗ ಮಾಡಿದರೆ ಭೂಮಿಯೇ ಢಮ್ಮೆಂದಿತೆಂಬ ತಲ್ಲಣ, ಪಾಕಿಸ್ತಾನಿ ಪರಮಾಣು ವಿಜ್ಞಾನಿಯನ್ನು ಬಂಧಮುಕ್ತ ಮಾಡಿದರೆ ಮೂರನೆಯ ವಿಶ್ವಯುದ್ಧ ಆದೀತೆಂಬ ಗಾಳಿಗುಲ್ಲು; ಹಂದಿಜ್ವರ ಬಂದರೆ ಜನರೆಲ್ಲ ಹುಳಗಳಂತೆ ಸಾಯುತ್ತಾರೆ ಎಂದು ಕೋಲಾಹಲ ಹೀಗೆ ಜನರನ್ನು ಹೆದರಿಸಿ ಹಣ ಕೀಳುವ ಈಗಿನ ಇಂಥ ಹೈಟೆಕ್ ದಂಧೆಯ ನಾನಾ ರೂಪಗಳು ಈ ಸಂಕಲನದಲ್ಲಿವೆ. ಭೂಮಿಯ ಈ ಮಗ್ಗುಲಿನಿಂದ ಆ ಮಗ್ಗುಲಿನ ವರೆಗಿನ ವಿಜ್ಞಾನ ವಿದ್ಯಮಾನಗಳನ್ನು ಒಟ್ಟಾರೆಯಾಗಿ ಹಿಡಿದು ಕಥೆಯಾಗಿ, ಒಗಟಾಗಿ, ರಸಮಯ ವರದಿಯಾಗಿ ಸ್ವಾರಸ್ಯಕರವಾಗಿ ಇಲ್ಲಿ ಪೋಣಿಸಲಾಗಿದೆ.
ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...
READ MORE