ಹಿರಿಯ ಚಿಂತಕ ಲಿಂಗಣ್ಣ ಸತ್ಯಂಪೇಟೆ ಅವರ ವೈಚಾರಿಕ ಕೃತಿ-ಮಠಗಳು ಮಾರಾಟಕ್ಕಿವೆ. ಸ್ವಾತಂತ್ಯ್ರಪೂರ್ವದಲ್ಲಿ ಮಠಗಳು ಆಯಾ ಸ್ಥಳೀಯ ಜನರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದು ಮರೆಯುವಂತಿಲ್ಲ. ಇಂದಿಗೂ ಕೆಲವು ಮಠಗಳು ತಮ್ಮ ಶಿಕ್ಷಣ ದಾಸೋಹ ಮಾತ್ರವಲ್ಲ ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡಿವೆ. ಬಸವಾದಿ ಶರಣರ ಚಿಂತನೆಗಳ ಪ್ರಚಾರ-ಪ್ರಸಾರಕ್ಕೆ ಕಂಕಣಬದ್ಧವಾಗಿವೆ. ಆದರೆ, ಬಹುತೇಕ ಮಠಗಳು ತಮ್ಮ ಈ ದಾಸೋಹಂ ಭಾವದಿಂದ ವಿಮುಖವಾಗುತ್ತಿರುವುದು ಸಹ ತಳ್ಳಿ ಹಾಕುವಂತಿಲ್ಲ.ಬಸವಾದಿ ಶರಣರ ಹೆಸರಿನಲ್ಲಿ ನಡೆಯುವ ಈ ಮಠಗಳು .ಶಿಕ್ಷಣವನ್ನು ವ್ಯಾಪಾರಕ್ಕಿಳಿಸಿವೆ. ಜನಸಾಮಾನ್ಯರನ್ನು, ಧಾರ್ಮಿಕವಾಗಿ, ಸಾಮಾಜಿಕವಾಗಿಯೂ ಶೋಷಿಸುತ್ತಿವೆ ಮಾತ್ರವಲ್ಲ, ನೈತಿಕವಾಗಿಯೂ ಅರ್ಧಪತನಕ್ಕೆ ಇಳಿದಿವೆ. ಈ ಹಿನ್ನೆಲೆಯಲ್ಲಿ, ಮಠಗಳ ಸೇವೆ-ಕರ್ತವ್ಯಗಳನ್ನು ನೆನಪಿಸಿಕೊಡುವ ರೀತಿಯಲ್ಲಿ ಇಲ್ಲಿಯ ಬರಹಗಳು ಮಠ-ಮಠಾಧೀಶರನ್ನು ಎಚ್ಚರಿಸುತ್ತವೆ. ಮಾತ್ರವಲ್ಲ; ಸಾರ್ವಜನಿಕರು ಸಹ ತಮ್ಮ ಎಂದಿನ ಸಾಂಪ್ರದಾಯಿಕ ಭಾವುಕ ನಡೆಯನ್ನು ಪುನರಾವಲೋಕಿಸುವಂತೆಯೂ ಪ್ರೇರಣೆಯಾಗಿ ಬರಹಗಳಿದ್ದು, ಮಠಗಳ ಮಾನವೀಯ ಪ್ರಜ್ಞೆಯನ್ನು ಪುನಃ ಬಡಿದೆಬ್ಬಿಸುತ್ತವೆ. ‘ಮಠಗಳು ಮಾರಾಟಕ್ಕಿವೆ’ ಎಂಬ ಕೃತಿಯ ಶೀರ್ಷಿಕೆಯು ಮೇಲ್ನೋಟಕ್ಕೆ, ಕಟುವಾಗಿ ಕಂಡುಬಂದರೂ, ಅವುಗಳು ನೀಡುತ್ತಾ ಬಂದಿರುವ ಸಮಾಜ ಸೇವೆಯನ್ನು ಸ್ಮರಿಸಿ, ಉದ್ದೇಶವನ್ನು ಮಾತ್ರ ನೆನಪಿಸುತ್ತವೆ ಹಾಗೂ ಕಾಯಕ-ದಾಸೋಹವನ್ನು ತಮ್ಮ ಉಸಿರಾಗಿಸಿಕೊಳ್ಳಲಿ ಎಂಬ ಆಶಯಗಳನ್ನು ಒಳಗೊಂಡಿದೆ.
©2024 Book Brahma Private Limited.