ಒಳಿತೆ ಕೆಡುಕು- ಕೆಡುಕೆ ಒಳಿತಾದ ಕಾಲಘಟ್ಟದಲ್ಲಿ ಭಾರತ ಇದೆ. ಸ್ವಾತಂತ್ಯ್ರ ಹೋರಾಟದ ಆದರ್ಶಗಳನ್ನು ವರ್ತಮಾನಕ್ಕೆ ತಲುಪಿಸುವವರು ಇಲ್ಲವಾಗುತ್ತಿದ್ದಾರೆ. ನಾಡು ಎತ್ತ ಸಾಗುತ್ತಿದೆ ಎಂಬ ಅನುಮಾನಗಳು ಮೂಡುತ್ತಿರುವಾಗ ನಿಜ ದೇಶಭಕ್ತಿ ಯಾವುದು ಎಂಬುದನ್ನು ಅರಹುವ ಯತ್ನ ಮಾಡಿದ್ದಾರೆ ಸಾಹಿತಿ, ಚಿಂತಕ ಯು.ಆರ್. ಅನಂತಮೂರ್ತಿ. ಹಿಂದುತ್ವಕ್ಕೂ ಹಿಂದ್ ಸ್ವರಾಜ್ಯಕ್ಕೂ ಇರುವ ವ್ಯತ್ಯಾಸಗಳು, ಯಾವುದು ಹೆಚ್ಚು ಜೀವಪರ, ತರುಣರು ರೂಢಿಸಿಕೊಳ್ಳಬೇಕಾದ ಆದರ್ಶಗಳನ್ನು ಕೃತಿ ಚರ್ಚಿಸುತ್ತದೆ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE