ಲೇಖಕ ಡಾ.ವಿಜಯಶ್ರೀ ಸಬರದ ಅವರ ಕೃತಿ-ಚಿಂತನ-ಮಂಥನ. ವಿವಿಧ ಚಿಂತನೆಗಳುಳ್ಳ ಲೇಖನಗಳ ಸಂಕಲನವಿದು. ಎಲ್ಲ ಚಿಂತನ ವಿಷಯಗಳು ವವಿಭಿನ್ನ ವಸ್ತು-ವಿಷಯಗಳನ್ನು ಆಯ್ದು ವಿಚಾರ ಪೂರ್ಣವಾಗಿ ಆಲೋಚಿಸಿ ಬರಹಕ್ಕೆ ಇಳಿಸಿದ್ದಾರೆ. ಈ ಸಂಕಲನದಲ್ಲಿ 18 ಚಿಂತನೆಗಳಿದ್ದು ಜೀವನ ಮೌಲ್ಯಗಳು -ಸಾಮರಸ್ಯ, ಅಂತರಂಗ-ಬಹಿರಂಗ, ಸಂಪ್ರದಾಯ- ಮೂಢನಂಬಿಕೆ- ವೈರಾಗ್ಯ, ಸ್ವಾತಂತ್ರ್ಯ, ನ್ಯಾಯಪದ್ಧತಿ- ಹೆಣ್ಣು ಭ್ರೂಣ ಹತ್ಯೆ,ದುಡಿಮೆ- ಸಂಸ್ಕೃತಿ -ಸಂವೇದನೆ, ಹೋರಾಟ- ಸ್ತ್ರೀ ವಿಮೋಚನೆ, ಧರ್ಮ-ದೇವತೆ ಪಾತಿವ್ರತ್ಯ, ಸಾತ್ವಿಕ- ರಾಜಸ -ತಾಮಸ ಮೊದಲಾದವು ಓದುಗರ ಗಮನ ಸೆಳೆಯುತ್ತವೆ.
ಮಹಿಳೆಯರ ಶೋಷಣೆ ಮತ್ತು ಸ್ತ್ರೀಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಖಚಿತ ಅಭಿಪ್ರಾಯ ಮಂಡಿಸುವ ಲೇಖಕಿ ವಿಜಯಶ್ರೀ ಸಬರದ. ಅವರು ಜನಿಸಿದ್ದು 1957ರ ಫೆಬ್ರುವಿರ 1ರಂದು. ತಂದೆ ಗುಣವಂತರಾವ ಪಾಟೀಲ. ತಾಯಿ ಸಂಗಮ್ಮ. ಪ್ರಾರಂಭಿಕ ಶಿಕ್ಷಣ ಹಾಗೂ ಕಾಲೇಜು ಪದವಿ ಶಿಕ್ಷಣವನ್ನು ಬೀದರ್ನಲ್ಲಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ’ಅನುಪಮಾ ನಿರಂಜನರ ಕಾದಂಬರಿಗಳು; ಒಂದು ಅಧ್ಯಯನ” ಎಂಬ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದರು. ಬೀದರ್ನ ಅಕ್ಕ ಮಹಾದೇವಿ ಮಹಿಳಾ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ...
READ MORE