ಹಿರಿಯ ನಟ, ಲೇಖಕ ಅಶೋಕ್ ಅವರ ‘ಬುದ್ಧ ಬಾಬಾ ಸಾಹೇಬ ಮತ್ತು ನಾನು’ ಒಂದು ವಿಶಿಷ್ಟ ಕೃತಿ. ಇಷ್ಟೂ ದಿನ ಮರೆಯಲ್ಲೇ ದುಡಿಯುತ್ತಿದ್ದ ಅಶೋಕ್ ಈಗ ಬರಹಗಾರರಾಗಿ ಕನ್ನಡಿಗರನ್ನು ಚಕಿತಗೊಳಿಸಿದ್ದಾರೆ!.
ಲೇಖಕ ಸಿ.ಎಸ್. ದ್ವಾರಕಾನಾಥ್ ಕೃತಿಗೆ ಬೆನ್ನುಡಿ ಬರೆದು ‘ಬುದ್ಧ ಬಾಬಾ ಸಾಹೇಬ ಮತ್ತು ನಾನು’ ಎಂಬ ಈ ಪುಸ್ತಕವನ್ನು ಬರೆಯುವ ಮೂಲಕ ತಮ್ಮಲ್ಲಿ ಅಂತರಗಂಗೆಯಂತೆ ಹರಿಯುತ್ತಿದ್ದ ಬರವಣಿಗೆಯ ಪ್ರತಿಭೆಯನ್ನು ಹೊರಹೊಮ್ಮಿದ್ದಾರೆ. “ಕ್ರಾಂತಿಯೋಗಿ ಬಸವಣ್ಣ” ಚಿತ್ರದಲ್ಲಿ ಬಸವಣ್ಣನಾಗಿಯೇ ಆಗಿಹೋಗಿದ್ದ ಅಶೋಕ್, ಈಗ ಭಗವಾನ್ ಬುದ್ಧ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತಂತೆ ಅರಿವು ಮೂಡಿಸುವಂತಹ ಒಂದು ವಿಶಿಷ್ಟ ಬರಹವನ್ನು ಬರೆದಿದ್ದಾರೆ!. ಬುದ್ಧ ಮತ್ತು ಅಂಬೇಡ್ಕರ್ ಅವರ ಜೀವನ ಮತ್ತು ಸಂದೇಶವನ್ನು ಇಟ್ಟುಕೊಂಡು ಇಂದಿನ ತಮ್ಮ ಕಾಲಘಟ್ಟದಲ್ಲಿ ಅದನ್ನು ಅನ್ವಯಿಸುವ ಮೂಲಕ ಒಂದು ರೀತಿಯಲ್ಲಿ ‘ಸ್ಕ್ರಿಪ್ಟ್’ ನಂತೆ ಕಾಣುವಂತಹ ಈ ಬರಹ ಕನ್ನಡಕ್ಕೆ ವಿಶಿಷ್ಟವೆನ್ನಿಸುತ್ತದೆ. ಬುದ್ಧ ಭಗವಾನರನ್ನು, ಬಾಬಾಸಾಹೇಬರನ್ನು ಅಶೋಕ್ ಅವರು ನೋಡುವ ದೃಷ್ಟಿಕೋನ ವಿಭಿನ್ನವಾದುದು, ವಿಶಿಷ್ಟವಾದುದು. ಅವರ ಕನ್ನಡ ಭಾಷೆಯಂತೂ ಅತ್ಯಂತ ಸುಂದರ ಮತ್ತು ಸುಲಲಿತ. ಈ ವಿಶಿಷ್ಟ ಕೃತಿ ಓದುಗರೆಲ್ಲರ ಮನ ಸೆಳೆಯುವಲ್ಲಿ ಯಾವುದೇ ಸಂದೇಹವಿಲ್ಲ. ಅಶೋಕ್ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು ಕನ್ನಡಕ್ಕೆ ಲಾಭ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.