ಬಸವಣ್ಣ-ಕಾರ್ಲ್ ಮಾರ್ಕ್ಸ್‌ರ ಮಾನವೀಯ ಹೋರಾಟಗಳು

Author : ನಿಷ್ಠಿ ರುದ್ರಪ್ಪ

₹ 15.00




Year of Publication: 2004
Published by: ಬಸವಕೇಂದ್ರ
Address: ಜಿ. ಮಲ್ಲಿಕಾರ್ಜುನ ಗೌಡ, ಬಸವಕೇಂದ್ರ, ಬಳ್ಳಾರಿ-583101

Synopsys

ಕವಿ ಹಾಗೂ ಲೇಖಕ ನಿಷ್ಠಿ ರುದ್ರಪ್ಪ ಅವರ ಕೃತಿ-ಬಸವಣ್ಣ ಹಾಗೂ ಕಾರ್ಲ್‌ಮಾರ್ಕ್ಸ್ ರ ಮಾನವೀಯ ಹೋರಾಟಗಳು. ಈ ಕೃತಿಯಲ್ಲಿ ಒಟ್ಟು 9 ಲೇಖನಗಳಿದ್ದು, ಪ್ರಮುಖವಾಗಿ ಬಸವಣ್ಣ ಮತ್ತು ಕಾರ್ಲ್ ಮಾರ್ಕ್ಸ್ ರ ಹೋರಾಟದ ಹಿಂದೆ ಇದ್ದ ಮಾನವೀಯ ಮೌಲ್ಯಗಳನ್ನು ಗುರುತಿಸಲು ಹಾಗೂ ಇಬ್ಬರೂ ಚಿಂತಕರೂ ಬೇರೆಬೇರೆ ಕಾಲಘಟ್ಟದಲ್ಲಿದ್ದರೂ ಅವರಿಬ್ಬರ ತುಡಿತ ದುಡಿಯುವ ಶ್ರಮಿಕ ವರ್ಗದ ಏಳಿಗೆಯ ಪರವಾಗಿತ್ತೆಂಬುದನ್ನು ಮತ್ತು ಎಲ್ಲಾ ರೀತಿಯ ಶೋಷಣೆ ಮುಕ್ತ ಸಮಾಜ ರಚನೆಯ ಇಬ್ಬರ ಕನಸಾಗಿತ್ತು ಎಂಬುದನ್ನು ಪ್ರತಿಪಾದಿಸಲಾಗಿದೆ.

ಈಶ್ವರವಾದ ಮತ್ತು ನಿರೀಶ್ವರವಾದದ ಆಚೆಯು ಮಾನವನ ಬದುಕಿದೆ. ಅದನ್ನು ಸುಂದರಗೊಳಿಸಿ ಸ್ವತಂತ್ರ ವಿಚಾರಧಾರೆಯ ವ್ಯಕ್ತಿಗಳ ನಿರ್ಮಾಣವು ಆ ಮಹನೀಯರ ಕನಸಾಗಿತ್ತು ಎಂದು ಸಮರ್ಥಿಸಿಕೊಳ್ಳಲಾಗಿದೆ. ಮಾತ್ರವಲ್ಲ; ಈ ಕೃತಿಯಲ್ಲಿನ ಇತರ ಲೇಖನಗಳು ಬಸವಾದಿ ಶರಣರ ವೈಚಾರಿಕ ಚಿಂತನೆಗಳನ್ನು ಕುರಿತಾಗಿವೆ.

About the Author

ನಿಷ್ಠಿ ರುದ್ರಪ್ಪ
(01 June 1966)

ಲೇಖಕ ನಿಷ್ಠಿ ರುದ್ರಪ್ಪ ಅವರು ಮೂಲತಃ ಬಳ್ಳಾರಿಯವರು. ತಂದೆ ನಿಷ್ಠಿ ಬಸವರಾಜಪ್ಪ, ತಾಯಿ ಪ್ರಭಾವತಿ. ಬಿ.ಕಾಂ, ಎಂ.ಎ, ಬಿ.ಇಡಿ ಪದವೀಧರರು. ಸ್ಮಾತಕೋತ್ತರ ವಚನ ಕಮ್ಮಟ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್,  ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು, ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯರು. ಖಾಸಗಿ ಕಂಪನಿಯಲ್ಲಿ ಸೇವೆ, ಬಳ್ಳಾರಿಯ ಲೋಕದರ್ಶನ ಪತ್ರಿಕೆಯಲ್ಲಿ ವರದಿಗಾರರಾಗಿ, ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಾರಿ ಹಾಗೂ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹೊಸಪೇಟೆಯ ಆಕಾಸವಾಣಿ ಕೇಂದ್ರದಿಂದ ‘ಚಿಂತನೆ’ ಹಾಗೂ ಹಚ್ಚೇವು ಕನ್ನಡದ ದೀಪ’ ದೂರದರ್ಶನದಲ್ಲಿ ...

READ MORE

Related Books