ಯುವ ಲೇಖಕಿ ವಿಹಾರಿಕಾ ಅಂಜನಾ ಹೊಸಕೇರಿ ಅವರ ’ಬದುಕೇ ಒಂದು ಸವಾಲು’ ಕೃತಿಯು ಚಿಂತನಶೀಲ ಬರವಣಿಗೆಗಳನ್ನು ಒಳಗೊಂಡಿದೆ. ಒಟ್ಟು ಬರಹಗಳಿವೆ. ಸಾಧನೆಯ ಮನಸ್ಸು, ಹಿಂದಿನ ಕಾಲ-ಇಂದಿನ ಕಾಲ, ಜೀವನವೇ ವಿದ್ಯೆ - ವಿದ್ಯೆಯೇ ಜೀವನ, ಗ್ರಂಥಾಲಯ ಪ್ರಕೃತಿ, ನಮ್ಮ ಭಾರತೀಯ ಯೋಧರೇ ನಮ್ಮೆಲ್ಲರ ಸಹೋದರರು, ಶಿಕ್ಷಕರು, ಧೈರ್ಯ, ಸಮಯ, ಆತ್ಮವಿಶ್ವಾಸವೇ ಯಶಸ್ಸಿನ ಶಕ್ತಿ, ಮುತ್ತಿನ ಮಾತುಗಳು, ಮುಳ್ಳಿನ ಹಾದಿ, ಹೆಣ್ಣು ಈ ಜಗದ ಕಣ್ಣು, ವಿಶಾಲ ಮನಸ್ಸು, ಜನ್ಮಕೊಟ್ಟ ದೇವತೆ, ಹಣ, ಶ್ರೀಮಂತಿಕೆ ಎಂಬ ಹೃದಯ, ಸಿಡಿಲು ಮಿಂಚಿಗೆ ಕರಗದಿರಲಿ, ನಮ್ಮ ಕುಟುಂಬ, ಮನಸ್ಸು, ಬದುಕೇ ಒಂದು ಸವಾಲು ಹೀಗೆ ವಸ್ತು ವೈವಿಧ್ಯತೆಯ ಬರಹಗಳಿವೆ. ವಯಸ್ಸಿಗೆ ಮೀರಿದ ಚಿಂತನೆಗಳ ಚಿತ್ತಾರವಿದೆ. ಕೆಲವಕ್ಕೆ ಭಾವದ ವೇಗವಿದ್ದರೆ ಮತ್ತೆ ಕೆಲವಕ್ಕೆ ಚಿಂತನೆಯ ನಿಧಾನವಿದೆ. ವಿಚಾರಗಳ ಅಭಿವ್ಯಕ್ತಿ, ಪ್ರಬಂಧಗಳ ಒಟ್ಟು ಬಂಧ, ಭಾಷೆಯನ್ನು ಬಳಸುವಾಗಿನ ಎಚ್ಚರ ಮತ್ತು ಸಂಯಮಗಳು ಇಲ್ಲಿ ಬರವಣಿಗೆಗಳ ಕೊಂಡಿಯಾಗಿದೆ. ವಿಷಯಗಳ ಆಯ್ಕೆಯು ಗಗನ ತುಂಬಿದ ಕಾಮನಬಿಲ್ಲಿನಂತೆ ವಿಸ್ತಾರವಾಗಿದ್ದು, ಪ್ರತಿಯೊಂದು ವಿಷಯದಲ್ಲಿ ಪುಟಿಯುವ ಆತ್ಮವಿಶ್ವಾಸ, ಮೌಲ್ಯಗಳ ಮೆರವಣಿಗೆ ಇವೆಲ್ಲವೂ ಬರವಣಿಗೆಯ ಕಲಾವಸ್ತುಗಳಾಗಿವೆ’ ಎಂದು ಪ್ರಶಂಸಿಸಿದ್ದಾರೆ.
ʻಬದುಕೇ ಒಂದು ಸವಾಲುʼ (ಚಿಂತನಶೀಲ ಬರೆಹಗಳು) ಕೃತಿಯ ಕುರಿತು ಲೇಖಕಿ ವಿಹಾರಿಕಾ ಅಂಜನಾ ಹೊಸಕೇರಿ ಅವರ ಮಾತು.
©2024 Book Brahma Private Limited.