ಯುವ ಬರಹಗಾರ್ತಿ ವಿಹಾರಿಕಾ ಅಂಜನಾ ಹೊಸಕೇರಿ ಮೂಲತಃ ಧಾರವಾಡ ಜಿಲ್ಲೆಯವರು. ತಂದೆ ಲಕ್ಷ್ಮಣ ಹೊಸಕೇರಿ, ತಾಯಿ ಜಯಲಕ್ಷ್ಮಿ. ಶಾಲಾ ದಿನಗಳಲ್ಲಿ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಹಲವಾರು ಬಹುಮಾನ ಪಡೆದಿದ್ದಾರೆ. ಮೊದಲಿನಿಂದಲೂ ಸಂಗೀತ, ಸಾಹಿತ್ಯ, ನೃತ್ಯ, ನಟನೆಯಲ್ಲಿ ಆಸಕ್ತಿ ಇತ್ತು. ಬುಕ್ ಬ್ರಹ್ಮ ಆಯೋಜಿಸಿದ್ದ 2020 ನೇ ಸಾಲಿನ ಕತಾಸ್ಪರ್ಧೆಯಲ್ಲಿ ’ಜನಮೆಚ್ಚಿದ ಕತೆ’ ಹಾಗೂ ’ಜನ ಮೆಚ್ಚಿದ ಲೇಖನ’ಗಳಿಗೆ ಬಹುಮಾನ ಪಡೆದಿದ್ದರು.