ಸಮಾಜಶಾಸ್ತ್ರೀಯ ನೆಲೆಯಲ್ಲಿ ಅಸ್ಪೃಶ್ಯತೆಯನ್ನು ಗ್ರಹಿಸುವ ಯತ್ನ ಕೃತಿಯದ್ದು. ಡಾ.ಎಸ್. ಬಿ. ಜೋಗೂರ ಬರೆದಿರುವ ಕೃತಿಯನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ.
ಅಸ್ಪೃಶ್ಯತೆಯ ಉಗಮ ಮತ್ತು ಬೆಳವಣಿಗೆಯನ್ನು ಪ್ರಧಾನವಾಗಿ ಚರ್ಚಿಸುವ ಕೃತಿ ಅದಕ್ಕೆ ಕಾರಣವಾದ ಜಾತಿ ವ್ಯವಸ್ಥೆಯನ್ನು ಹೊಸ ಬಗೆಯಲ್ಲಿ ವಿಶ್ಲೇಷಿಸುತ್ತದೆ. ಒಟ್ಟು ಹದಿಮೂರು ಅಧ್ಯಾಯಗಳನ್ನು ಹೊಂದಿರುವ ಕೃತಿ, ಮೊದಲನೆಯ ಅಧ್ಯಾಯದಲ್ಲಿ ಅಸ್ಪೃಶ್ಯತೆಯ ಬೇರುಗಳನ್ನು ತೆರೆದಿಡುತ್ತದೆ. ಎರಡನೆಯ ಅಧ್ಯಯನದಲ್ಲಿ ಅಸ್ಪೃಶ್ಯತೆಯ ದೌರ್ಜನ್ಯವನ್ನು ಅಂಕಿಅಂಶಗಳ ಸಹಿತ ವಿವರಿಸಲಾಗಿದೆ.
ಮೂರನೆ ಅಧ್ಯಾಯದಲ್ಲಿ ಅಸ್ಪಶ್ಯತೆಯನ್ನು ಅಂಬೇಡ್ಕರ್, ಗಾಂಧಿ, ಲೋಹಿಯಾ ಹಾಗೂ ಜೋತಿಭಾ ಫುಲೆ ದೃಷ್ಟಿಯಲ್ಲಿ ವಿವರಿಸಲಾಗಿದೆ.
ವರ್ಗ ಮತ್ತು ಜಾತಿಯ ನಡುವಿನ ಅಂತರವನ್ನು ಸ್ಪಷ್ಟಪಡಿಸುವ ಲೇಖಕರು, ಹೇಗೆ ಹಿರಿಯ ರಾಜಕಾರಣಿಗಳೂ ಜಾತೀಯ ಸಂಕಷ್ಟಗಳಿಗೆ ಸಿಲುಕಿದರು ಎಂಬುದನ್ನು ಉದಾಹರಣೆಗಳ ಮೂಲಕ ವಿವರಿಸಿದ್ದಾರೆ.
©2024 Book Brahma Private Limited.