ಹಿರಿಯ ಸಮಾಜ ವಿಜ್ಞಾನಿ ಮುಜಾಪ್ಫರ್ ಅಸ್ಸಾದಿ ಅವರ ಸಮಕಾಲೀನ ಬೆಳವಣಿಗೆಗಳನ್ನು ಕುರಿತು ವಿಭಿನ್ನ ಒಳನೋಟಗಳನ್ನು ನೀಡುವ ಬರೆಹಗಳ ಸಂಕಲನ. ಸದ್ಯದ ರಾಜಕಾರಣವನ್ನು ಆವರಿಸಿರುವ ಐಡೆಂಟಿಟಿ ಪಾಲಿಟಿಕ್ಸ್ನ ಸ್ವರೂಪವನ್ನ ಕುರಿತು ಚರ್ಚಿಸುವ ಲೇಖಕರು ಆ ಕಾರಣದಿಂದ ಹೇಗೆ ರಾಜಕಾರಣವು ಮೂಲಭೂತವಾದದ ನೆರಳಿನಲ್ಲಿ ನಡೆಯುತ್ತಿದೆ ಎಂಬ ಅಂಶವನ್ನ ಚರ್ಚಿಸಿದ್ದಾರೆ. ರಾಜಕೀಯ-ಸಾಮಾಜಿಕ ಚಿಂತನೆಗಳಲ್ಲಿ ಆಸಕ್ತರಾಗಿರುವವರು ಗಮನಿಸಬೇಕಾದ ಕೃತಿಯಿದು.
ಡಾ. ಮುಜಾಫರ್ ಅಸ್ಸಾದಿ ಅವರು ಮಂಗಳೂರು ವಿ.ವಿ.ಯಿಂದ ಸ್ನಾತಕೋತ್ತರ ಪದವಿ, ನವದೆಹಲಿಯ ಜೆಎನ್ ಯು ನಿಂದ ಎಂ.ಫಿಲ್ ಹಾಗೂ ಪಿಎಚ್ ಡಿ ನಂತರ ಶಿಕಾಗೋ ವಿ.ವಿ.ಯಿಂದ ರಾಕ್ ಫೆಲ್ಲರ್ ಫೆಲೋ, ಪೋಸ್ಟ್ ಡಾಕ್ಟೊರಲ್ ಪದವೀಧರರು. ಈವರೆಗೆ 11 ಕೃತಿಗಳನ್ನು ರಚಿಸಿದ್ದಾರೆ. ಬುಡಕಟ್ಟು ಸಮುದಾಯಗಳ ಸ್ಥಳಾಂತರ ಕುರಿತ ಹೈಕೋರ್ಟ್ ಸಮಿತಿ ಅಧ್ಯಕ್ಷರಾಗಿ, ವರದಿ ನೀಡಿದ್ದಾರೆ. ಸದ್ಯ, ಮೈಸೂರು ವಿ.ವಿ.ಯ ರಾಜ್ಯಶಾಸ್ತ್ರದ ಹಿರಿಯ ಪ್ರಾಧ್ಯಾಪಕರು. ಕೃತಿಗಳು: ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ, ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ. ಪ್ರಶಸ್ತಿಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಪುಸ್ತಕ ಬಹುಮಾನ ...
READ MORE