ರಾಷ್ಟ್ರೀಯತೆ, ಸಂಸ್ಕೃತಿ, ಮನುಸ್ಮೃತಿ, ಭಗವದ್ಗೀತೆ...ಮುಂತಾದ ವಿಷಯಗಳ ಇಂದಿನ ಚರ್ಚಿತ ವಿಷಯಗಳ ಕುರಿತು ಪರ ವಿರೋಧದ ವಾದಗಳು, ವ್ಯಾಖ್ಯಾನಗಳು ಹಾಗೂ ವೈಭವೀಕರಣ ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಈ ವಿಷಯಗಳ ಬಗ್ಗೆ ಸತ್ಯಾಂಶಗಳು, ವಾಸ್ತವಾಂಶಗಳನ್ನು ವಿವರಿಸುವ ಪ್ರಯತ್ನದ ಭಾಗವಾಗಿ ಜಿ.ರಾಮಕೃಷ್ಣ ಅವರು ರಚಿಸಿರುವ ಕೃತಿ' ವರ್ತಮಾನ'.
’ಚರಿತ್ರೆಯ ಬೆಳಕಿನಲ್ಲಿ ವರ್ತಮಾನದ ಹೆಜ್ಜೆಗಳು’ ಎಂದಿರುವ ಲೇಖಕರು ಗತವನ್ನು ಕೆದಕಿ ಅದರೊಳಗಿದ್ದ ಸತ್ಯವನ್ನು, ಧರ್ಮಶಾಸ್ತ್ರಕ್ಕೆ ಸಂಬಂಧಿಸಿದ ನಮ್ಮ ಗ್ರಂಥಗಳು ಚರ್ಚೆಯ ದೃಷ್ಟಿಯಿಂದ ಏನ್ನನ್ನು ತಿಳಿಸುತ್ತವೆ ಎಂಬುದನ್ನು ವಿವರಿಸಿದ್ದಾರೆ. ಮೌರ್ಯರ ಕಾಲದ ಅರ್ಥಶಾಸ್ತ್ರದ ಕುರಿತು ಸುದೀರ್ಘವಾದ ಸಮಕಾಲೀನ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾದ ವಿಶ್ಲೇಷಣೆಯನ್ನು ಕೃತಿಯಲ್ಲಿ ನೀಡಲಾಗಿದೆ.
ಪ್ರಜಾಪ್ರಭುತ್ವಕ್ಕೆ ಆತಂಕಕಾರಿಯಾಗಿ ಪರಿಣಮಿಸಿರುವ ಇತ್ತೀಚಿನ ದಶಕಗಳಲ್ಲಿ ತಳ ಸಮುದಾಯ ಮತ್ತು ದುರ್ಬಲ ವರ್ಗದವರ ಮೇಲೆ ನಡೆಯುತ್ತಿರುವ ಶೋಷಣೆ ಬಗ್ಗೆ ವಿವರಿಸಲಾಗಿದೆ. ವರ್ತಮಾನದ ಹಲವಾರು ಗೊಂದಲಗಳನ್ನು ಪರಿಹರಿಸಲು ಸಮರ್ಥವಾಗಿರುವ ಮತ್ತು ಚರಿತ್ರೆಯ ಅಭ್ಯಾಸಕ್ಕೆ ಉಪಯುಕ್ತವಾದ ಕೃತಿ ಇದಾಗಿದೆ.
ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ಶ್ರೀಮತಿ ಗಂಗಮ್ಮ ಶ್ರೀ ಬಿ. ಶಿವಣ್ಣ ದತ್ತಿ ಪ್ರಶಸ್ತಿ ದೊರೆತಿದೆ.
©2024 Book Brahma Private Limited.