ಗ್ರೀಕ್ ಸಾಹಿತ್ಯದ ಉಗಮ ವಿಕಾಸ, ಲ್ಯಾಟಿನ್ ಅಮೇರಿಕಾದ ಸಾಹಿತ್ಯದಲ್ಲಿಯ ವಿಶೇಷತೆ, ಅದು ಇತರ ಸಾಹಿತ್ಯ ಪ್ರಕಾರದ ಮೇಲೆ ಬೀರಿದ ಪರಿಣಾಮವನ್ನು ಲೇಖಕ ಜನಾರ್ಧನ್ ಭಟ್ ಅವರು ವಸ್ತುನಿಷ್ಠವಾಗಿ ವಿಮರ್ಶಿಸಿದ್ದಾರೆ. ವಿವಿಧ ಲೇಖಕರ ಕಥೆ, ಕಾದಂಬರಿ, ವಿಮರ್ಶಾ ಕೃತಿಗಳನ್ನು ತಮ್ಮ ಓದಿನ ವಿಸ್ತಾರದ ಒಳನೋಟ ತಂದುಕೊಂಡು ರಚಿಸಿರುವ ಈ ಕೃತಿ ಮಹತ್ವದ್ದಾಗಿದೆ.
ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...
READ MORE