ಇಂದು ಇಡೀ ಜಗತ್ತೇ ಕೊರೊನಾ ವೈರಸ್‌ನಿಂದ ತಲ್ಲಣಿಸಿದೆ. ಸೂಕ್ಷ್ಮ ರೋಗ ಜಗತ್ತಿನ ಜನರನ್ನೆಲ್ಲಾ ದಂಗು ಬಡಿಸಿದೆ. ದೇವರು, ಧರ್ಮ, ಜಾತಿಗಳೆಲ್ಲಾ ಬಾಗಿಲು ಎಳೆದುಕೊಂಡಿದ್ದು ಈ ಪರಿಸ್ಥಿತಿ ಬಂದಿರುವುದು ಮನುಷ್ಯ ಕುಲದ ದೊಡ್ಡ ದುರಂತ. ಇಂತಹ ಜಗತ್ತಿನ ತಲ್ಲಣಗಳ ಒಟ್ಟು ಬರಹಗಳ ಸಂಗ್ರಹ 'ಶತಮಾನದ ಕಥೆ' - The travel history of CORONA. ವರ್ತಮಾನದಲ್ಲಾಗುತ್ತಿರುವ ಕೊರೊನಾ ತಲ್ಲಣ, ವ್ಯಥೆಯನ್ನುಲೇಖಕ ಪೂರೀಗಾಲಿ ಮರಡೇಶಮೂರ್ತಿ ಅವರು ಇಲ್ಲಿ ನೀಡಿದ್ದಾರೆ.
ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು 3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...
READ MORE