ಸಾಹಿತಿ -ಚಿಂತಕ ಕೆ.ಎಸ್. ಭಗವಾನ್ ಅವರು ಬರೆದ ಚಿಂತನಾಭರಿತ ಕೃತಿ-ಶಂಕರಾಚಾರ್ಯ ಮತ್ತು ಪ್ರತಿಗಾಮಿತನ. ದೇಶದ ನಾಲ್ಕೂ ಕಡೆ ನಾಲ್ಕು ಮಠಗಳನ್ನು ಸ್ಥಾಪಿಸುವ ಮೂಲಕ ಹಿಂದೂ ಧರ್ಮದ ಪ್ರಚಾರ-ಪ್ರಸಾರ ಕಾರ್ಯ ಕೈಗೊಂಡು, ಶಂಕರಾಚಾರ್ಯರು ವಿವಿಧ ಧರ್ಮಗಳು ಅಭಿವೃದ್ಧಿ ಹೊಂದದಂತೆ ಮಾಡಿರುವರು ಎಂದು ಗಂಭೀರವಾಗಿ ಆರೋಪಿಸಿರುವ ಕೃತಿ ಇದು. ಆದರೂ, ಈ ಕುರಿತು ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ಈ ಕೃತಿ ಉತ್ತಮ ಆಕರ ಗ್ರಂಥವಾಗಲಿದೆ.
ವಿಮರ್ಶಕ, ಅನುವಾದಕರಾದ ಕೆ.ಎಸ್.ಭಗವಾನ್ ಅವರು 14-07-1945ರಂದು ಮೈಸೂರು ಜಿಲ್ಲೆಯ ಕಲ್ಲಹಳ್ಳಿಯಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಷಯದಲ್ಲಿ ಎಂ.ಎ ಪದವಿ ಪಡೆದಿರುವ ಅವರು ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಡಿ.ಲಿಟ್.ಪದವಿಯನ್ನೂ ಪಡೆದಿದ್ದಾರೆ. ಬಂಡಾಯ ವಿಮರ್ಶೆಯ ಮೊದಲ ಮತ್ತು ಮುಖ್ಯ ವಿಮರ್ಶಕರಾದ ಭಗವಾನ್ ವಿಮರ್ಶೆಯಲ್ಲಿ ಅಂತರ್ ಶಿಸ್ತೀಯ ಅಧ್ಯಯನಗಳನ್ನು ಪ್ರಾರಂಭಿಸಿದವರು. ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿರುವ ಅವರು, ಮೈಸೂರಿನ ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಅನುವಾದಕರಾಗಿ ಹೆಸರುವಾಸಿಯಾಗಿರುವ ಭಗವಾನ್ ಷೇಕ್ಸ್ ಪಿಯರ್ ನ ಒಂಬತ್ತು ಮಹತ್ವದ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಕೃತಿ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ...
READ MORE