‘ಮಂಕುತಿಮ್ಮನ ಕಗ್ಗ’ ದಂತಹ ಕೃತಿಯ ಮೂಲಕ ಸಂಸ್ಕೃತಿ, ಮೌಲ್ಯ, ಅಧ್ಯಾತ್ಮ, ತಾತ್ವಿಕ ಚಿಂತನೆ, ಜೀವನದರ್ಶನಗಳನ್ನು ಮಾಡಿಸಿದ ಹಿರಿಯ ಸಾಹಿತಿ ಡಿ.ವಿ.ಜಿ. ಅವರು ಸಂಕೀರ್ಣ ಸ್ಮೃತಿ ಸಂಪುಟ ಕೃತಿಯಲ್ಲಿ ತಮ್ಮ ಅಪಾರ ಜ್ಞಾನದ ಚಿಂತನೆಯನ್ನು ಕೃತಿಯುದ್ದಕ್ಕೂ ಹಬ್ಬಿಸಿದ್ದಾರೆ. ಆ ಸಮೃದ್ಧಿಯು ನಮಗೆ ಜೀವನ ಮೌಲ್ಯಗಳ ಹಾಗೂ ಜೀವನ ಸಾರ್ಥಕತೆಯ ದರ್ಶನ ಮಾಡಿಸುತ್ತದೆ. ಐಶ್ವರ್ಯ, ಭೌತಿಕ ಆಸ್ತಿ-ಪಾಸ್ತಿ ಯಾವವೂ ಜೀವನದ ಸೊತ್ತಲ್ಲ. ಅವು ನಮ್ಮದು ಆಗಲಾರವು. ನಮ್ಮದು ಏನಿದ್ದರೂ ಅದು ಜೀವನ ಪ್ರೀತಿಯೆ. ವ್ಯಕ್ತಿಗತ ಹಾಗೂ ಸಾರ್ವಜನಿಕ ಜೀವನದಲ್ಲಿ ಪ್ರೀತಿಯನ್ನು ನೀಡಿ ಬದುಕುವುದೇ ನಾವು ಸತ್ತ ನಂತರವೂ ಉಳಿಯುವ ಕೊಡುಗೆ. ಸಾಧು-ಸತ್ಪುರುಷರು ಇಂತಹ ಜೀವನ ಕಳೆದಿದ್ದಾರೆ ಎನ್ನುವ ಮೂಲಕ ತಮ್ಮಉನ್ನತ ಮಟ್ಟದ ಚಿಂತನೆಗಳನ್ನು ಕೃತಿಯಲ್ಲಿ ನೀಡಿದ್ದಾರೆ.
ಮಂಕುತಿಮ್ಮನ ಕಗ್ಗ ಕಾವ್ಯದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ಲೇಖಕ- ಪತ್ರಕರ್ತ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ 1887ರ ಮಾರ್ಚ್ 17ರಂದು ಜನಿಸಿದ ಗುಂಡಪ್ಪ ಅವರು ಪ್ರೌಢಾಶಾಲಾ ಶಿಕ್ಷಣವನ್ನು ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಪಡೆದರು. ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸ್ವಂತ ಅಧ್ಯಯನದಿಂದ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾಗಿದ್ದರು. ಮುಳುಬಾಗಿಲಿನ ಒಂದು ಶಾಲೆಯಲ್ಲಿ ಕೆಲವು ಕಾಲ ಬದಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅನಂತರ ಕೋಲಾರದ ಸೋಡಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿ ಬೇಸತ್ತು ಬೆಂಗಳೂರಿನಲ್ಲಿ ಜಟಕಾಬಂಡಿಗೆ ಬಣ್ಣ ಬಳಿಯುವ ಕಾರ್ಖಾನೆಯಲ್ಲಿ ಕೆಲಕಾಲ ಕೆಲಸ ಮಾಡಿದರು. ಅನಂತರ ಪತ್ರಿಕಾರಂಗ ...
READ MORE