ರಾಷ್ಟ್ರೀಯತೆ ಮತ್ತು ಮುಸ್ಲಿಮರು

Author : ಫಕೀರ್ ಮುಹಮ್ಮದ್ ಕಟ್ಪಾಡಿ

Pages 48

₹ 15.00




Year of Publication: 1993
Published by: ಕೊಟ್ಟಾರ ಪ್ರಕಾಶನ
Address: 377/4, ‘ನಜ್ಮಾ’ ಕೊಟ್ಟಾರ, ಮಂಗಳೂರು – 570006

Synopsys

ಲೇಖಕ  – ಫಕೀರ್‍ ಮುಹಮ್ಮದ್ ಕಟ್ಪಾಡಿ ಅವರ ಈ ಪುಸ್ತಕವು  ರಾಷ್ಟ್ರೀಯತೆ  ಮತ್ತು ಮುಸ್ಲಿಮರು, ಬಾಬರಿ ಮಸೀದಿ – ರಾಮಜನ್ಮಭೂಮಿ ವಿವಾದ, ಮುಸ್ಲಿಂ ಲೋಕ ಮತ್ತು ಸಾಹಿತ್ಯಾನುಭವ ಎಂಬ ಮೂರು ಪ್ರಬಂಧಗಳನ್ನು ಒಳಗೊಂಡ ವಿಚಾರ- ವಿಮರ್ಶೆಯನ್ನು ಪ್ರಸ್ತಾಪಿಸುತ್ತದೆ.

ಈ ಪುಸ್ತಕದಲ್ಲಿ ಫಕೀರ್‍ ಮುಹಮ್ಮದ್ ಅವರ ಪ್ರಬಂಧಗಳು ಸೌಹಾರ್ದ, ಸಹನೆಯನ್ನು ಸಮಾಜದಲ್ಲಿ ಎತ್ತಿ ಹಿಡಿಯುವಂತವು. ಕೋಮುವಾದದ ಹಿನ್ನೆಲೆಯಲ್ಲಿ ಪ್ರಸ್ತಾಪಿಸುವ ಇವರ ಪ್ರಬಂಧ ರಚನೆ ಸ್ನೇಹ ಮತ್ತು ವಿಶ್ವಾಸದ ನೆಲೆಯಲ್ಲಿ , ಸತ್ಯವಾಗಿರುವ ವಸ್ತು ಸ್ಥಿತಿಯನ್ನು ಸಮರ್ಥವಾಗಿ ವಿಶ್ಲೇಷಿಸಲಾಗಿದೆ.

About the Author

ಫಕೀರ್ ಮುಹಮ್ಮದ್ ಕಟ್ಪಾಡಿ
(25 June 1949)

ಕತೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿ ಅವರು ಮೂಲತಃ ಉಡುಪಿ ಜಿಲ್ಲೆಯ ಬಾರಕೂರಿನವರು. 1949 ಜೂನ್ 25ರಂದು ಜನಿಸಿದರು. ಬಿ.ಕಾಂ. ಪದವೀಧರರಾಗಿದ್ದ ಅವರು ಬ್ಯಾಂಕ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ’ಗೋರಿ ಕಟ್ಟಿಕೊಂಡವರು’, ’ನೋಂಬು’, ’ದಜ್ಜಾಲ’, ’ಅತ್ತರ್ ಹಾಜಿಕ್ ಮತ್ತು ಇತರ ಕತೆಗಳು’, ’ಪಚ್ಚ ಕುದುರೆ’ ಕತಾಸಂಕಲನಗಳು. ನೀಳ್ಗತೆಗಳ ಸಂಕಲನ ’ಕಡವು ಮನೆ’ ಹಾಗೂ ’ಸರಕುಗಳು’ ಮತ್ತು ’ಕಚ್ಚಾದ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ’ಬೇರೂತಿನಿಂದ ಜರುಸಲೇಮಿಗೆ (2010) ಮತ್ತು ಮಂಟೋ ಬರೆದ ದೇಶ ವಿಭಜನೆಯ ಕತೆಗಳು’ ಅನುವಾದ ಕೃತಿಗಳು. ’ಕಯ್ಯೂರಿನ ರೈತವೀರರು’, ’ರಾಷ್ಟ್ರೀಯತೆ ಮತ್ತು ಮುಸ್ಲಿಮರು’, ’ಸೂಫಿ ಸಂತರು’ ...

READ MORE

Related Books