ಕಣ್ಣಿಗೆ ಕಾಣದ ಕೊರೊನಾ ವೈರಸ್ ಸೃಷ್ಟಿಸಿದ ಲಾಕ್ ಡೌನ್ ಮತ್ತು ಕ್ವಾರಂಟೈನ್ ಗಳ ರೂಪಕ ಮತ್ತು ಪೇಚು ಪರದಾಟ, ದಿಗ್ಬಂಧನಗಳ ಕಥನ ‘ಕ್ವಾರಂಟೈನ್ ಕ್ವಾಟ್ಲೆ’. ಕೃತಿಯಲ್ಲಿ ಲೇಖಕರು ಕೊರೋನಾದ ವಿಷಮತೆಯ ಬಗ್ಗೆ ತಿಳಿಸುತ್ತಾ ಅದರ ವೈಶಾಲ್ಯ, ವ್ಯಾಪ್ತಿ, ವೈರುಧ್ಯ, ಅದು ಹರಡುವ ವಿಷಣ್ಣತೆಗಳನ್ನು ಮನಮುಟ್ಟುವಂತೆ ಮಂಡಿಸಿದ್ದಾರೆ.
ಕನ್ನಡ ಜನಪ್ರಿಯ ಹಾಸ್ಯಸಾಹಿತಿಗಳಲ್ಲೊಬ್ಬರು ತುರುವೇಕೆರೆ ಪ್ರಸಾದ್ ಅವರು. ಮೂಲತಃ ತುಮಕೂರು ಜಿಲ್ಲೆ ತುರುವೇಕೆರೆ ಅವರಾದ ಅವರು ತಮ್ಮ ಹಾಸ್ಯ, ಚುಟುಕುಗಳಿಂದ ತಾಲೂಕಿನಲ್ಲೇ ಮನೆ ಮಾತಾಗಿದ್ದಾರೆ. ಹಲವು ಟಿ.ವಿ. ಧಾರಾವಾಹಿಗಳಿಗೆ ಸಂಭಾಷಣೆ, ಸಾಹಿತ್ಯವನ್ನು ರಚಿಸಿದ್ದಾರೆ. ನಮಸ್ಕಾರ, ವೈಫು ಮತ್ತು ವೆಹಿಕಲ್ಲು, ಅಶ್ವಮೇಧ, ಮಿನಿ ಭಾಮಿನಿಯರ ನಡುವೆ,ಬಿಚ್ಚು ಮಾತು, ಜೋಕು ಜೋಕೆ, ಹಾಲಜ್ಜಿ ಮತ್ತು ಜಾಪಾಳ ಲೇಹ, ಲಘು ಸಿದ್ಧಾಂತ ಕಾ-ಮಿಡಿ, ಟೈಂಪಾಸ್, ಕನಕಲಕ್ಷ್ನಿಯ ಕಂಟ್ರಿ ರೈಡ್(ನಗೆ ಬರಹಗಳ ಸಂಕಲನಗಳು) ಭ್ರಮರ(ಹಾಸ್ಯ ಕಾದಂಬರಿ) ಮುಚ್ಚಿಡದ ಮಾತು(ಅಂಕಣ ಬರಹಗಳು) ಬಾಕ್ಸ್ ಐಟಂ(ಸುದ್ದಿ ತುಣುಕುಗಳು), ಸುತ್ತ ಮುತ್ತ, ಹೆಗಲಿನಿಂದ ಹೆಗಲಿಗೆ ಗಾಂಧಿಗಿರಿ (ಪತ್ರಿಕಾ ...
READ MORE