ಲೇಖಕ ಗಂಗಾರಾಂ ಚಾಂಡಾಳ ಅವರ ಕೃತಿ ‘ಪ್ರಸ್ತುತ-ಅಪ್ರಸ್ತುತ’. ಡಾ. ಬಿ.ಆರ್. ಅಂಬೇಡ್ಕರ ಅವರ ಬರೆದ ಭಾರತೀಯ ಸಂವಿಧಾನವನ್ನು ಮನುಸ್ಮೃತಿಯೊಂದಿಗೆ ನಡೆಸಿದ ತೌಲನಿಕ ಅಧ್ಯಯನವೇ ಈ ಕೃತಿ. ಪ್ರಾಚೀನ ಭಾರತವು ಮನುಸ್ಮೃತಿಯನ್ನು ಸಂವಿಧಾನವಾಗಿಸಿಕೊಂಡಿತ್ತು. ಅದರಲ್ಲಿ ಏನೇ ಲೋಪ-ದೋಷಗಳಿದ್ದರೂ ಅಂದು ಎಲ್ಲರೂ ಪಾಲಿಸಲೇ ಬೇಕು ಎಂಬ ನಿಯಮವಿತ್ತು. ಪಾಲಿಸದಿದ್ದರೆ ಮನುಸ್ಮೃತಿಯಲ್ಲಿ ವಿಧಿಸಿದ ಶಿಕ್ಷೆ ಅವರಿಗೆ ಕಾದಿತ್ತು. ಮನುಸ್ಮೃತಿಯು ಜಾತಿ ವ್ಯವಸ್ಥೆಯನ್ನು ಕರ್ಮಸಿದ್ಧಾಂತದಡಿ ಪ್ರತಿಪಾದಿಸುತ್ತದೆ. ಈ ಸಿದ್ಧಾಂತವು ಮನುಕುಲಕ್ಕೆ ಶಾಪ ಎಂದು ಡಾ. ಅಂಬೇಡ್ಕರ ಅವರ ಭಾರತದ ಸ್ವಾತಂತ್ಯ್ರದ ನಂತರ ನೂತನ ಸಂವಿಧಾನ ರಚಿಸಿದ್ದು, ಎಲ್ಲ ದಮನಿತ ವರ್ಗ-ಜನತೆಗೆ ವಿಶೇಷ ಹಕ್ಕು-ಮೀಸಲಾತಿ ಹಾಗೂ ಕರ್ತವ್ಯಗಳನ್ನು ನೀಡಿದರು. ಹೀಗೆ ಮನುಸ್ಮೃತಿ ಹಾಗೂ ಭಾರತದ ಸಂವಿಧಾನ ಹೀಗೆ ಎರಡರ ತೌಲನಿಕ ಅಧ್ಯಯನವು ಈ ಕೃತಿಯ ವಸ್ತುವಾಗಿದೆ.
ಲೇಖಕ ಗಂಗಾರಾಂ ಚಂಡಾಳ ಅವರು ಕೋಲಾರ ಜಿಲ್ಲೆಯ ಯಡಹಳ್ಳಿ (ಜನನ: 18-06-1961) ಗ್ರಾಮದವರು. ತಂದೆ ವೆಂಕಟಪ್ಪ, ತಾಯಿ ವೆಂಕಟಗಿರಿಯಮ್ಮ. ಮಂಡ್ಯದ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವೀಧರರು. ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಯು.ಆರ್.ಪಿ ವತಿಯಿಂದ (2005) ಎಂ.ಟೆಕ್ ವ್ಯಾಸಂಗ ಪೂರೈಸಿದರು. ಕನ್ನಡ, ತೆಲುಗು, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಬಲ್ಲವರು. ಕರ್ನಾಟಕ ಅಂಬೇಡ್ಕರ್ ಗ್ರಾಮ ಸಮಾಜ ಸಂಘಟನೆಯಿಂದ ಸಮಾಜ ಸೇವೆಯಲ್ಲಿ ನಿರತರು. ಗೋಕಾಕ್ ಚಳವಳಿ, ಬಂಡಾಯ ಸಾಹಿತ್ಯ ಚಳವಳಿ ಹಾಗೂ ದಲಿತ ಚಳವಳಿಯಲ್ಲಿ ಪಾಲ್ಗೊಂಡಿದ್ದರು. 68ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಶೀಲ ವಿಷಯ ಮಂಡನೆ., ಸಮ್ಮೇಳನ, ಉತ್ಸವಗಳು ...
READ MORE