ಲೇಖಕ ಡಾ. ಮಹಾದೇವ ಬಡಿಗೇರ ಅವರ ಕೃತಿ- ಪ್ರಬಂಧ ಸಾಹಿತ್ಯ ಚರಿತ್ರೆ. ಲಲಿತ ಪ್ರಬಂಧ ಸಾಹಿತ್ಯ ಹೊಸಗನ್ನಡ ಸಾಹಿತ್ಯದ ಒಂದು ಒಬ್ಬ ರೂಪ.ಭಾವಗೀತೆ,ಕಥೆ, ಕಾದಂಬರಿ,ನಾಟಕ ಇತ್ಯಾದಿ ಪ್ರಬಂಧ ಸಾಹಿತ್ಯವೂ ಸಹ ಬಹುದೊಡ್ಡ ಪರಂಪರೆಯನ್ನು ಹೊಂದಿದೆ. ಆದರೂ, ಪ್ರಬಂಧ ಸಾಹಿತ್ಯವು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕನ್ನಡದಲ್ಲಿ ಈ ಕುರಿತು ಇದುವರೆಗೆ ವಿಸ್ತೃತವಾದ ಅಧ್ಯಯನ ನಡೆದಿಲ್ಲ. ಈ ಕೊರತೆಯನ್ನು ಈ ಕೃತಿಯು ತುಂಬಿಕೊಟ್ಟಿದೆ. .ಲಲಿತ ಪ್ರಬಂಧ ಸಾಹಿತ್ಯ ಅಧ್ಯಯನವು ಲಲಿತ ಪ್ರಬಂಧ ಸಾಹಿತ್ಯಮೀಮಾಂಸೆ, ಲಲಿತ ಪ್ರಬಂಧ ಸಾಹಿತ್ಯ ಚರಿತ್ರೆ, ಲಲಿತ ಪ್ರಬಂಧ ಸಾಹಿತ್ಯ ಅಧ್ಯಯನದ ಸಮೀಕ್ಷೆ,ಲಲಿತ ಪ್ರಬಂಧ ಸಾಹಿತ್ಯದ ಕೊಡುಗೆಯನ್ನು ಒಳಗೊಂಡಿದೆ. ಲಲಿತ ಪ್ರಬಂಧ ಸಾಹಿತ್ಯ ಮೀಮಾಂಸೆ ಈ ಭಾಗದಲ್ಲಿ ಗದ್ಯದ ಬೆಳವಣಿಗೆ,ಲಲಿತಪ್ರಬಂಧ ಪ್ರಬಂಧ ಪದ ಬಳಕೆ,ಲಲಿತ ಪ್ರಬಂಧದ ಸ್ವರೂಪ ಮತ್ತು ಲಕ್ಷಣಗಳು ಮತ್ತು ಲಲಿತಪ್ರಬಂಧ ಪ್ರಕಾರಗಳನ್ನು ಕುರಿತು ಈ ಪುಸ್ತಕದಲ್ಲಿ ವಿಶ್ಲೇಷಿಸಿದ್ದಾರೆ. ಗದ್ಯದ ಪ್ರಾಚೀನ ಪರಂಪರೆಯನ್ನು ವಿವೇಚಿಸುತ್ತಾ, ಗದ್ಯ ವೇದದಷ್ಟು ಹಳೆಯದು, ಋಗ್ವೇದ ಸಂಹಿತೆ ಭಾಗದಲ್ಲಿ ಅಥರ್ವವೇದದಲ್ಲಿ ಮತ್ತು ಉಪನಿಷತ್ತುಗಳಲ್ಲಿ ಅದರ ಉಲ್ಲೇಖ ಸಿಗುತ್ತದೆ ಎಂದಿದ್ದಾರೆ. ಅಲ್ಲದೆ ಲಲಿತ ಪ್ರಬಂಧ ಸಾಹಿತ್ಯದ ಕೊಡುಗೆ: ಇತಿಮಿತಿ ಮತ್ತು ಸಾಧ್ಯತೆಗಳನ್ನು ಕುರಿತದ್ದು.ಹೊಸಗನ್ನಡ ಗದ್ಯ ಸಾಹಿತ್ಯ ಪ್ರಕಾರಕ್ಕೆ ಲಲಿತಪ್ರಬಂಧ ಸಾಹಿತ್ಯದ ಕೊಡುಗೆ ಅದ್ಭುತ. ಕನ್ನಡ ಗದ್ಯಕ್ಕೆ ಇದು ಹೊಸ ಚೈತನ್ಯ ನೀಡಿದೆ. ಹಾಸ್ಯ, ವ್ಯಂಗ್ಯ, ವಿಡಂಬನೆ,ವಿಚಾರಗಳನ್ನು ಲಲಿತಪ್ರಬಂಧ ಸಾಹಿತ್ಯ ಬಳಸಿಕೊಂಡು, ಹೇಗೆ ಹೊಸತನ ಹೊಸ ಶೈಲಿಯಲ್ಲಿ ಮೂಡಿಸಿತು ಎನ್ನುವುದನ್ನು ವಿಸ್ತೃತವಾಗಿ ವಿಶ್ಲೇಷಿಸಿದ್ದಾರೆ. ಕಲಬುರ್ಗಿ ಜಿಲ್ಲೆಯ ಪ್ರಬಂಧಕಾರರನ್ನು ತಮ್ಮ ಸಮೀಕ್ಷೆಗೆ ಒಳಪಡಿಸಿ ಕೃತಿ ಇದು.
©2024 Book Brahma Private Limited.