ಲೇಖಕ ದರುಶನ (ಎಚ್.ಎಸ್. ದರ್ಶನ) ಅವರ ಬರಹಗಳ ಕೃತಿ-ಪೋಷಕತ್ವ ಮತ್ತದರ ತತ್ವ. ಜನಸಂಖ್ಯೆ ಸ್ಫೋಟದಿಂದ ಆಗುವ ಅನಾಹುತಗಳನ್ನುಕೇಂದ್ರವಾಗಿಸಿಕೊಂಡು ಬರೆದ ಬರಹಗಳು ಇಲ್ಲಿವೆ. ಮಕ್ಕಳಿಗೆ ತಂದೆಯಾಗುವುದು ಮಾತ್ರ ಪೋಷಕರ ಹೊಣೆಗಾರಿಕೆ ಎಂಬ ಭಾವನೆ ಬಹುಜನರಲ್ಲಿದೆ. ಆದರೆ, ಅವರನ್ನು ಬೆಳೆಸುವ, ಆರೈಕೆ ಮಾಡುವ ಹೊಣೆಗಾರಿಕೆ ಇದೆ ಎಂಬುದನ್ನು ಬಹುತೇಕ ಪೋಷಕರು ಮರೆಯುತ್ತಾರೆ. ಇದು ಪೋಷಕರು ಹೊಣೆಗಾರಿಕೆಯನ್ನು ಪ್ರಶ್ನಿಸುತ್ತದೆ ಮಾತ್ರವಲ್ಲ; ಜನಸಂಖ್ಯೆ ಸ್ಫೋಟದ ಸಮಸ್ಯೆಗೂ ಕಾರಣವಾಗಿ, ಇಡೀ ದೇಶದ ಸಮಸ್ಯೆಗೂ ಮೂಲವಾಗುತ್ತದೆ ಎಂಬ ಅಂಶವನ್ನು ಕೃತಿಯಲ್ಲಿ ಗಂಭೀರವಾgi ಪರಿಗಣಿಸಲಾಗಿದೆ. ‘ಈ ಪುಸ್ತಕ ಓದಿದವರು ಉತ್ತಮ ಪೋಷಕರಾಗುವ ಧ್ಯೇಯ ತೊಡುತ್ತಾರೆ. ಇಲ್ಲವಾದರೆ, ಕಾಂಡೋಮ್ ತೊಡುತ್ತಾರೆ' ಎಂಬ ಮಾತು ಕೃತಿಯಲ್ಲಿ ಉಲ್ಲೇಖಿಸಿದ್ದು, ಪೋಷಕರ ಹೊಣೆಗಾರಿಕೆಯನ್ನು ಎಚ್ಚರಿಸುತ್ತದೆ ಮತ್ತು ತಪ್ಪಿದರೆ, ವ್ಯಂಗ್ಯವಾಗಿಯೂ ವಿಡಂಬಿಸುತ್ತದೆ. ಈ ಸಾಲು ಕೃತಿಯ ಒಟ್ಟು ಧ್ವನಿಯಾಗಿದೆ.
'ಪೋಷಕತ್ವ ಮತ್ತದರ ತತ್ವ' ಕೃತಿಯ ಕುರಿತು ಲೇಖಕ ದರುಶನ ಹೆಚ್. ಎಸ್ ಅವರ ಮಾತುಗಳು.
©2024 Book Brahma Private Limited.