ಪೆರಿಯಾರ್ ಚಿಂತನೆ

Author : ಸಿ. ಚಂದ್ರಪ್ಪ

Pages 200

₹ 100.00




Year of Publication: 2016
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ದಕ್ಷಿಣ ಭಾರತದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳುವಳಿಗೆ ಕ್ರಾಂತಿಯ ಪ್ರಖರತೆಯನ್ನು ತಂದುಕೊಟ್ಟ ಮಹಾನಾಯಕ ಪೆರಿಯಾರ್. ಕೇವಲ ಒಬ್ಬ ವ್ಯಕ್ತಿಯಾಗಿ ಉಳಿಯದೆ, ಒಂದು ಸ್ವಾಭಿಮಾನಿ ಯುಗವಾಗಿ ಚರಿತ್ರೆಯಲ್ಲಿ ದಾಖಲುಗೊಳ್ಳುತ್ತಾರೆ. ದ್ರಾವಿಡ ಚಳುವಳಿಯ ರೂಪದಲ್ಲಿ ಶೋಷಿತ ಸಮುದಾಯಗಳ ಅಸ್ಮಿತೆಯನ್ನು ಜಾಗೃತಗೊಳಿಸಿ ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ರಚನಾತ್ಮಕ ಹೋರಾಟ ಹುಟ್ಟುಹಾಕಿದ ಪೆರಿಯಾರ್‌ರವರ ಜೀವನ ಮತ್ತು ಚಿಂತನಾ ಸೆಲೆಗಳನ್ನು ಡಾ. ಸಿ. ಚಂದ್ರಪ್ಪನವರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

About the Author

ಸಿ. ಚಂದ್ರಪ್ಪ

ಲೇಖಕ, ಚಿಂತಕ ಡಾ. ಸಿ. ಚಂದ್ರಪ್ಪ ಅವರು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರಾಗಿ ಮಸಲವಾಡ ಗ್ರಾಮದವರು. 1993ರಲ್ಲಿ ಬೆಂಗಳೂರಿನ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ ಪದವಿಯನ್ನು ಪ್ರಥಮ ರ್‍ಯಾಂಕ್ ದೊಂದಿಗೆ ಚಿನ್ನದ ಪದಕ ಪಡೆದರು. ಯುಜಿಸಿ ಫೆಲೋಷಿಪ್ ನೆರವಿನಿಂದ ಬೆಂಗಳೂರು ವಿಶ್ವವಿದ್ಯಾಲಯದಿಂದ (2001) ಪಿಎಚ್.ಡಿ .ಪಡೆದರು.  1996ರಲ್ಲಿ, ಚಿತ್ರದುರ್ಗದ ಸರ್ಕಾರದ ಕಾಲೇಜು ಉಪನ್ಯಾಸಕರಾಗಿ, ನಂತರ ಚಿಕ್ಕಬಳ್ಳಾಪುರ, ದೇವನಹಳ್ಳಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿದರು. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಇತಿಹಾಸ ಸ್ನಾತಕೋತ್ತರ ಕೇಂದ್ರ ಸಂಯೋಜಕ, ಸಹ ಪ್ರಾಧ್ಯಾಪಕರಾದರು. ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವರ್ತೂರಿನಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರು. Urbanisation & Industrialisation in Karnataka, History and ...

READ MORE

Related Books