ಪೆರಿಯಾರ್ ಕ್ರಾಂತಿ ಕಿಡಿ

Author : ಕೆ. ಮಾಯಿಗೌಡ

Pages 145

₹ 90.00




Year of Publication: 2014
Published by: ಸಪ್ನ ಬುಕ್ ಹೌಸ್
Address: # 11, 3ನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು-560 001.
Phone: 08040114455

Synopsys

ವೈಚಾರಿಕ ಲೇಖಕ-ಚಿಂತಕ ತಮಿಳುನಾಡಿನ ಪೆರಿಯಾರ್ ರಾಮಸ್ವಾಮಿ ಅಯ್ಯಂಗಾರ್ ಅವರ ವೈಚಾರಿಕ ಕೃತಿ-ಪೆರಿಯಾರ್ ಕ್ರಾಂತಿ ಕಿಡಿ. ಇಲ್ಲಿಯ ವೈಚಾರಿಕ ಲೇಖನಗಳನ್ನು ಲೇಖಕ ಕೆ. ಮಾಯಿಗೌಡ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾವು ಮನುಷ್ಯರಿದ್ದೇವೆ. ವಿಚಾರ ಮಾಡುವ ಸಾಮರ್ಥ್ಯ ಕೇವಲ ಮನುಷ್ಯನಿಗೆ ಇದೆ. ಅದನ್ನು ಬಳಸಿಕೊಳ್ಳದಿದ್ದರೆ ಪಶುವಿಗಿಂತಲೂ ಕಡೆ. ಜನರು ವೈಚಾರಿಕವಾಗಿ ಜಾಗೃತರಾಗದಂತೆ ಪುರೋಹಿತ ವರ್ಗ ಆಥವಾ ಮೂಲಭೂತವಾದಿಗಳು, (ಕಾಣದ ದೇವರು ನೆಪದಲ್ಲಿ) ಜನರಿಗೆ ವಿಚಾರ ಶಕ್ತಿ ಇರುವುದನ್ನು ಮರೆಯಿಸಿದ್ದಾರೆ. ಆ ಮೂಲಕ ಶೋಷಣೆ ಮಾಡುತ್ತಿದ್ದಾರೆ. ಇಂತಹ ವಿಚಾರಗಳ ಲೇಖನಗಳನ್ನು ಕನ್ನಡ ಸಾಹಿತ್ಯಕ್ಕೆ ಸೇರ್ಪಡೆ ಮಾಡಿರುವ ಲೇಖಕರ ಕಳಕಳಿ ಪ್ರಶಂಸಾರ್ಹ.

About the Author

ಕೆ. ಮಾಯಿಗೌಡ

ಕೆ. ಮಾಯಿಗೌಡ ಅವರು ಮಂಡ್ಯ ಜಿಲ್ಲೆಯ ನವಿಲುಮಾರನಹಳ್ಳಿಯವರು. ನಿವೃತ್ತ ಮುಖ್ಯೋಪಾಧ್ಯಯರು ರಾಷ್ಟ್ರಕವಿ ಕುವೆಂಪು ಅವರೊಂದಿಗೆ ಒಡನಾಟ. ಸ್ವಾತಂತ್ಯ್ರಯೋಧ ಕನಕಪುರದ ಕರಿಯಪ್ಪನವರು, ಅಂಬೇಡ್ಕರ್, ಕೋವೂರ್, ಬಸವ, ಮಾರ್ಕ್ಸ್ , ಪೆರಿಯಾರ್ ಚಿಂತನೆಗಳಿಂದ ಪ್ರೇರಣೆ. ಸ್ಥಳೀಯ ಪತ್ರಿಕೆಯಲ್ಲೂ ಕೆಲಸ ಮಾಡಿದರು. ಮಾಜಿ ಸಚಿವ ಬಿ. ಬಸಲಿಂಗಪ್ಪ ಅವರ ಒಡನಾಟದಿಂದ (1978) ಪಾಂಡವಪುರ ವಿಧಾನಸಭಾ ಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತರು. ನಂತರ, ದೇವರಾಜ ಅರಸು ಅವರೊಂದಿಗೆ ಇದ್ದ ಆತ್ಮೀಯ ಒಡನಾಟವು ಇತ್ತು.  ಕೋವೂರು ಕಂಡ ವೈಜ್ಞಾನಿಕ ಸತ್ಯ-ಇವರ ಅನುವಾದಿತ ಕೃತಿ.   ...

READ MORE

Related Books