ʼಪರಿಪ್ರಶ್ನʼ ಲೇಖಕ ಹೂ.ವೆ. ಶೇಷಾದ್ರಿ ಅವರ ವೈಚಾರಿಕ ಬರಹಗಳ ಸಂಕಲನ. ಈ ಕೃತಿಯಲ್ಲಿ ವಿಶಿಷ್ಟ ವೈಯಕ್ತಿಕ ಸಮಸ್ಯೆಗಳು, ಧರ್ಮಕ್ಲೇಶಗಳು, ಆಧ್ಯಾತ್ಮಿಕ ಸಂದೇಹಗಳು, ಇತಿಹಾಸ-ಪುರಾಣಾದಿ ಪ್ರಸಕ್ತಿಗಳು, ವ್ಯಷ್ಟಿ-ಸಮಷ್ಟಿ, ಜಾತಿ-ಮತ ವಿಷಯಕಗಳ ಜಿಜ್ಞಾಸೆ, ಆಚಾರ-ಸುಧಾರಣೆ, ಸಂಸ್ಕೃತಿಯ ವಿಶ್ವರೂಪ – ಹೀಗೆ ಹತ್ತಾರು ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಶ್ನೋತ್ತರಗಳನ್ನು ವಿಷಯಾನುಗುಣವಾಗಿ ವರ್ಗೀಕರಿಸಿ ಕೊಡಲಾಗಿದೆ. ನೇರವಾಗಿ ಲೇಖನಗಳಿರದೆ ಪ್ರಶ್ನೋತ್ತರ ರೀತಿಯಲ್ಲಿ ಇದ್ದು ಓದುಗರಿಗೆ ಬೇಗನೇ ತಲುಪುವ ಜೊತೆಗೆ ತಮ್ಮಲ್ಲಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಲ್ಲಿಯೂ ಈ ಬರಹಗಳು ನೆರವಾಗುತ್ತವೆ. ಲೇಖಕರು ಸರಳವಾಗಿ ಇಲ್ಲಿಯ ಬರಹಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಈ ಕೃತಿಯಲ್ಲಿ ವಿವರಿಸಿದ್ದಾರೆ.
ಖ್ಯಾತ ಲೇಖಕ ಶೇಷಾದ್ರಿಯವರು (26-05-1926) ಹುಟ್ಟಿದ್ದು ಹೊಂಗಸಂದ್ರದಲ್ಲಿ. ತಂದೆ ವೆಂಕಟರಾಮಯ್ಯ, ತಾಯಿ ಪಾರ್ವತಮ್ಮ. ಬೆಂಗಳೂರಿನ (19476) ಸೆಂಟ್ರಲ್ ಕಾಲೇಜಿನಿಂದ ರಸಾಯನ ಶಾಸ್ತ್ರದಲ್ಲಿ ಸ್ವರ್ಣಪದಕದೊಂದಿಗೆ ಎಂ.ಎಸ್ಸಿ. ಪದವೀಧರರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರು. 1980ರಲ್ಲಿ ಕ್ಷೇತ್ರೀಯ (ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು) ಪ್ರಚಾರ ಕಾರ್ಯ ನಿರ್ವಹಣೆ, ಸಂಘದ ಪ್ರಧಾನ ಕಾರ್ಯದರ್ಶಿಯಾಗಿಯೂ ಆಗಿದ್ದರು.ಸಂಘದ ವೈಚಾರಿಕ ಹಾಗೂ ಸೈದ್ಧಾಂತಿಕ ಬರಹಗಳನ್ನು ಬರೆದರು. ವಿಕ್ರಮ, ಉತ್ಥಾನ-ಕನ್ನಡ ಪತ್ರಿಕೆಗಳಲ್ಲಿ, ಇಂಗ್ಲಿಷ್ನ ಆರ್ಗನೈಸರ್, ಹಿಂದಿಯ ಪಾಂಚಜನ್ಯ ಹಾಗೂ ದೇಶದ ಇತರ ಭಾಷೆಗಳ ನಿಯತ ಕಾಲಿಕೆಗಳಲ್ಲಿ ಲೇಖನ, ವಿಮರ್ಶಾತ್ಮಕ ವಿಶ್ಲೇಷಣೆಗಳನ್ನು ಬರೆದರು. ಕೃತಿಗಳು-ಯುಗಾವತಾರ, ಅಮ್ಮಾ ಬಾಗಿಲು ತೆಗೆ, ಚಿಂತನಗಂಗಾ, ದೇಶ ...
READ MORE