ಪರಕಾಯ- ಲೇಖಕ ರಾಮಲಿಂಗಪ್ಪ ಟಿ. ಬೇಗೂರು ಅವರ ಲೇಖನಗಳ ಸಂಕಲನ ಕೃತಿ. ಸಂಸ್ಕೃತಿ-ಆಚರಣೆ ಇತ್ಯಾದಿ ವಿಷಯಗಳ ಮೇಲಿನ ಗಂಭೀರ ಚಿಂತನೆಗಳ ಬರಹಗಳನ್ನು ಒಳಗೊಂಡ ಕೃತಿ ಇದು. ಈ ಸಂಸ್ಕೃತಿ-ಆಚರಣೆಗಳನ್ನು ಹೇಗೆ ನೋಡಬೇಕು. ಹೇಗೆ ಸ್ವೀಕರಿಸಬೇಕು ಇತ್ಯಾದಿ ಚಿಂತನೆಗಳ ಮಾರ್ಗವೊಂದರ ಕುರಿತು ಬರಹಗಳಿವೆ. ಇಂತಹ ಆಚರಣೆಗಳ ಉದ್ದೇಶಗಳ ಕುರಿತ ಗೊಂದಲಗಳ ನಿವಾರಣೆಯೂ ಇಲ್ಲಿಯ ಚಿಂತನೆಗಳಲ್ಲಿ ಪರಿಹಾರ ರೂಪು ಪಡೆದಿವೆ.
ವಿಮರ್ಶಕ-ಲೇಖಕ ರಾಮಲಿಂಗಪ್ಪ ಟಿ. ಬೇಗೂರು ಅವರು ಮೂಲತಃ ನೆಲಮಂಗಲ ತಾಲ್ಲೂಕಿನ ತೆಪ್ಪದ ಬೇಗೂರು ಗ್ರಾಮದವರು. 1968ರ ಡಿಸೆಂಬರ್ 29ರಂದು ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಆರು ಚಿನ್ನದ ಪದಕಗಳೊಂದಿಗೆ ಪ್ರಥಮ ರಾಂಕ್ನಲ್ಲಿ ಕನ್ನಡ ಎಂ.ಎ. ಪದವಿ. ಬೆಂಗಳೂರು, ಚಳ್ಳಕೆರೆ, ಕುಕನೂರು, ಕೋಲಾರ, ಚಿಂತಾಮಣಿಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಸದ್ಯ ಕೆಂಗೇರಿ ಪದವಿ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿದ್ದಾರೆ. ಕನ್ನಡ ಕಾವ್ಯ, ವಿಚಾರಸಾಹಿತ್ಯ, ಸಂಶೋಧನೆ, ವಿಮರ್ಶೆಗಳಲ್ಲಿ ಪರಿಶ್ರಮ ಇರುವ ಇವರಿಗೆ ಜಿ.ಎಸ್.ಎಸ್. ಕಾವ್ಯಪ್ರಶಸ್ತಿ ಲಭಿಸಿದೆ. ’ಮಾಯಾಪಾತಾಳ’,’ಸಂಕರಬಂಡಿ’, ಮಾರ್ಗಾಂತರ, ಪರಕಾಯ, ಎಡ್ವರ್ಡ್ ಸೈದ್, ಅಲ್ಲಮಪ್ರಭು : ಆಧುನಿಕ ಪೂರ್ವ ಅನುಸಂಧಾನಗಳು ಮೊದಲಾದವು ಪ್ರಕಟಿತ ...
READ MORE