ತಮಿಳುನಾಡಿನ ಮಹಾನ್ ಚಿಂತಕ, ಸಮಾಜ ಸುಧಾರಕ ಪೆರಿಯಾರ್ ಅವರ ಪಂಚಮುಖ ತ್ರಿಶೂಲದ ಯುದ್ಧ ಕುರಿತು ನ್ಯಾ. ಪಿ. ವೇಣುಗೋಪಾಲ್ ಅವರು ಬರೆದ ಕೃತಿಯನ್ನು ಲೇಖಕ ಜಿ. ಶರಣಪ್ಪ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂಡಿಯಾದ ಸಾಂಸ್ಕೃತಿಕ ಚರಿತ್ರೆ ಎಂದರೆ, ಅದು ವೈದಿಕ ಅವೈದಿಕಗಳ ನಡುವಿನ ಸಂಘರ್ಷಾತ್ಮಕ ಕಥನ. ಅದು ನಿನ್ನೆಯದಲ್ಲ; ಆರ್ಯರು ಈ ನೆಲದಲ್ಲಿ ಕಾಲಿಟ್ಟ ದಿನದಿಂದಲೂ ಆಗುತ್ತಾ ಸಾಗಿರುವ ಸಮರ. ಈ ಸಮರಯಾನದ ಸಂಕಲನವೇ ರಾಮಾಯಣ. ಆರ್ಯ ದ್ರಾವಿಡ ಸಂಘರ್ಷದ ಈ ಪುರಾಣ ಕಥನವನ್ನು ಆರ್ಯಕರಣೀಗೊಳಿಸುತ್ತಾ ಒಳಗು ಮಾಡಿ ಈ ನೆಲದ ಸಾಂಸ್ಕೃತಿಕ ವಸ್ತು ಸತ್ಯವನ್ನು ಅಪಮಾನಿಸುತ್ತಾ ನಡೆದಿರುವುದು ದುರಂತ ವ್ಯಂಗ್ಯವೇ ಸರಿ. ಇಂಥಹ ಸಂಸ್ಕೃತಿ ವಿದ್ರೋಹದ ವಿರುದ್ಧ ತಿರುಗಿ ಬಿದ್ದು ಹೋರಾಡಿದವರು ಹಲವು ಜನರಿದ್ದಾರೆ. ಸಮಕಾಲೀನ ಸಂದರ್ಭದ ಈ ಬಗೆಯ ಹೋರಾಟಗಾರರ ಸಾಲಿನಲ್ಲಿ ಪೆರಿಯಾರ್ ಬಹುದೊಡ್ಡ ಹೆಸರು. ವರ್ಣವ್ಯವಸ್ಥೆಯ ಸಾಮಾಜಿಕ ಅನ್ಯಾಯಗಳನ್ನು ನಿಷ್ಠುರವಾಗಿ ಖಂಡಿಸಿ ದೊಡ್ಡ ಚಳವಳಿಯನ್ನು ಮಾಡಿದವರು ಪೆರಿಯಾರ್. ಅವರ ಹೋರಾಟ ತಮಿಳುನಾಡಿನ ರಾಜಕೀಯ ಪಲ್ಲಟಕ್ಕೆ ಕಾರಣವಾದದ್ದು, ಅದರ ವೈಚಾರಿಕ ಗೆಲುವಿನ ಪ್ರತೀಕವೇ ಸರಿ.
©2024 Book Brahma Private Limited.