ಸಾಮಾಜಿಕ ಬದುಕನ್ನ ಹಾಳುಗೆಡವಿ, ಜನರ ಶಾಂತಿ ನೆಮ್ಮದಿಗಳಿಗೆ ಕೊಳ್ಳಿಯಿಡುತ್ತಿರುವ ಘಟನೆಗಳತ್ತ, ಸಂಗತಿಗಳತ್ತ, ದೇವರು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರ, ಅತ್ಯಾಚಾರಗಳತ್ತ, ಆಡಳಿತದ ಸೂತ್ರ ಹಿಡಿದು ರಾಜ್ಯ, ದೇಶಗಳ ಸಂಪತ್ತನ್ನು ಲೂಟಿ ಹೊಡೆಯುತ್ತಿರುವವರತ್ತ, ಗಮನ ಹರಿಸಿ ಬರೆದಿರುವ ಈ ಕಥನ ವೈಚಾರಿಕ ಕಥನ ಎಂದೂ ಹೇಳಬಹುದು. ದೌರ್ಜನ್ಯದ ವಿರುದ್ಧದ ಧ್ವನಿ ಪ್ರಾಮಾಣಿಕವಾಗಿರುವುದು ಇಲ್ಲಿನ ಕಥನದಲ್ಲಿ ಕಂಡುಬರುತ್ತದೆ. ಪುರಾಣ ಕಥೆಗಳನ್ನು ಓರೆಗಚ್ಚುವ ಕೆಲಸ ಇಲ್ಲಿನ ಕಥನದಲ್ಲಿಆಗಿದೆ.