ಕವಿ ಲೇಖಕ ಸುಭಾಶ್ಚಂದ್ರ ಕಶೆಟ್ಟಿ, ಬಾಚನಾಳ ಅವರು ಬರೆದ ಚಿಂತನೆಗಳ ಸಂಕಲನ-ನಿತ್ಯಸತ್ಯ. ಸ್ವಾಭಾವಿಕ ಚಿಂತನೆಯ ಪದರಗಳಿವೆ. ಅಭಿವ್ಯಕ್ತಿಯಲ್ಲಿ ದರ್ಪಕ್ಕಿಂತ ಕಳಕಳಿಇವೆ. ಮಾನವೀಯತೆಯ ಕರುಣೆ ಇದೆ. ಆರೋಗ್ಯಕ್ಕೆ ಕಾಯಕ ಗೌರವವನ್ನು ತಂದು ಕೊಡುವ ನೆಮ್ಮದಿಯಿದೆ. ಪರಿಸರವನ್ನು ಹಸನಗೊಳಿಸುವ ಹಂಬಲವಿದೆ. ಅವರ ಚಿಂತನೆಗಳಲ್ಲಿ ನಿತ್ಯ ಸತ್ಯಗಳು ತುಂಬಿವೆ. ವ್ಯಕ್ತಿಯ ಬದುಕು ಸಾಮಾಜಿಕ ಮೌಲ್ಯದ ಕೇಂದ್ರ, ವ್ಯಕ್ತಿಯ ಸರ್ವತೋಮುಖ ಚರಿತ್ರೆಗೆ ಸಮಾಜದ ಸಂಸ್ಥೆ ಸಂಸ್ಕೃತಿಯ ತಳಹದಿ ಕಾರಣ, ಸಾಲ ಶೂಲವಾಗುವ ಬಗೆ, ಅರಿವು ವ್ಯಕ್ತಿಯ ವೃಷ್ಟಿ ಹಾಗೂ ಸಮಷ್ಟಿ ವ್ಯಕ್ತಿತ್ವ ಹೀಗೆ ಚಿಂತನೆಗಳು ಹರಳುಗಟ್ಟಿವೆ.
ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು. ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...
READ MORE