ನಿರಾಭರಣ ಭಾರತ

Author : ಮಂಜುನಾಥ ಉಲವತ್ತಿ ಶೆಟ್ಟರ್

Pages 228

₹ 170.00




Year of Publication: 2018
Published by: ಜ್ಯೋತಿ ಪ್ರಕಾಶನ
Address: # ಎಂ. 45, ಕರ್ನಾಟಕ ಬ್ಯಾಂಕ್ ರಸ್ತೆ, ವಿವೇಕಾನಂದ ವೃತ್ತ, ಮೈಸೂರು
Phone: 9342274331

Synopsys

ಮಂಜುನಾಥ್ ಉಲವತ್ತಿ ಶೆಟ್ಟರ್ ಅವರ ವೈಚಾರಿಕ ಬರಹಗಳ ಸಂಕಲನ-ನಿರಾಭರಣ ಭಾರತ. 4. ನಿರಾಭರಣ ಭಾರತ  ಹೊಸ ಅರ್ಥನೀತಿಯಿಂದ ಹಳ್ಳಿಯ ಬದುಕು ಮೂರುಬಟ್ಟಿಯಾದುದನ್ನು ವಿವರಿಸುತ್ತದೆ. ಜಾಗತೀಕರಣದ ನಂತರ ವಿದೇಶಗಳ ಕೃಷಿ ಉತ್ಪನ್ನ ದೇಶದ ಮಾರುಕಟ್ಟೆಗೆ ಲಗ್ಗೆಯಿಟ್ಟು ಒಕ್ಕಲಿಗರು ತೊಂದರೆಗೊಳಗಾಗಿದ್ದಾರೆ. ಸರಕಾರದ ಬೆಂಬಲ ಬೆಲೆಯಿಂದ ಪ್ರಯೋಜನವಿಲ್ಲ. ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿರ್ಧಾರವಾಗುವವರಿಗೆ ಗ್ರಾಮ ಭಾರತ ಬದಲಾಗಲು ಸಾಧ್ಯವಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯೂ ಶೂನ್ಯಬಡ್ಡಿ ದರದ ಸಾಲ ರೈತರಿಗೆ ಲಭ್ಯವಾಗಬೇಕು. ನಗರದ ಕಸವನ್ನು ರಸವನ್ನಾಗಿ ಮಾಡಿ ರೈತರಿಗೆ ಒದಗಿಸಿದರೆ, ಮತ್ತೆ ಸೆಗಣಿ ಗೊಬ್ಬರಕ್ಕೆ ಮಾರು ಹೋದರೆ ಸಂಪೂರ್ಣವಾಗಿ ರಸಗೊಬ್ಬರ ರಾಸಾಯನಿಕ ಔಷಧಿಗಳ ಮೊರೆ ಹೋಗದೆ ಜೈವಿಕ ಔಷಧ, ಜೈವಿಕಗೊಬ್ಬರಗಳ ಕಡೆ ಚಲಿಸಿದರೆ ಮಾತ್ರ ಗ್ರಾಮಗಳ ಉದ್ಧಾರ ಸಾಧ್ಯ, ಅದು ಸಾಧ್ಯವೇ? ಎಂಬ ಪ್ರಶ್ನೆ ನಮ್ಮ ಮುಂದಿದೆ. 
ಭಾರತದಲ್ಲಿ ನೀರು ಸಾಕಷ್ಟಿದ್ದರೂ ಅದರ ನಿರ್ವಹಣೆ ಸರಿ ಇಲ್ಲ.. ನೀರು ನಿರ್ವಹಣೆ ಕುರಿತು ಲೇಖನವಿದೆ. ಭಾರತ ಸ್ವಚ್ಛ ಆಗುತ್ತಿಲ, ಆಂತರಿಕ ಮತ್ತು ಬಾಹ್ಯ ಕಸದಿಂದ ಭಾರತ ನರಳುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಶೌಚಾಲಯಗಳೇ ಇಲ್ಲ ಸೇರಿದಂತೆ ಅತಿ ತಂತ್ರಜ್ಞಾನ ಬಳಕೆಯ ಖಿನ್ನತೆ ಹುಟ್ಟುವ ಬಗ್ಗೆ ವಿಶ್ಲೇಷಿಸುತ್ತಾರೆ.  ಮೊಬೈಲ್, ಟಿವಿ, ಕಂಪ್ಯೂಟರ್, ಲ್ಯಾಪ್‍ಟ್ಯಾಪ್ ಮುಂತಾದವುಗಳ ಬಳಕೆಯಿಂದ ಯುವಜನರಲ್ಲಿ ನಿರಾಭರಣ ಭಾರತ ಖಿನ್ನತೆ ಕಾಣಿಸಿಕೊಳ್ಳುತ್ತದೆ. ಈ ದೇಶ ಸರಳ ಬದುಕಿನ ಪ್ರಯೋಗ ನಡೆಸಿದ ಗಾಂಧಿಯ ಕಡೆ ನೋಡಬೇಕಿದೆ. ವಿಶ್ವದಲ್ಲಿ ದೊಡ್ಡ ಪ್ರಜಾಪ್ರಭುತ್ವವೆಂದು ಭಾರತ ಹೆಸರು ಪಡೆದಿದ್ದರೂ ಒಂದು ಹೊತ್ತು ಉಂಡು ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗುವ ಕೋಟಿ ಕೋಟಿ ಜನರು ಇರುವವರಿಗೆ ಈ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲವೆಂದು ಲೇಖಕರು ತಮ್ಮ ಬರಹಗಳಲ್ಲಿ ಅಭಿಪ್ರಾಯಪಟ್ಟಿದ್ದಾರೆ. 

ಭಾರತ ಕೃಷಿ ಪ್ರಧಾನ ದೇಶವಾಗಿದ್ದರು ಕೃಷಿಗೆ ಒತ್ತು ಕೊಟ್ಟಿಲ್ಲ.ವಿಶ್ವದಲ್ಲಿ ಖರೀದಿಯಾಗುವ ಶಸ್ತಾಸ್ತ್ರಗಳಲ್ಲಿ ಶೇ.14 ರಷ್ಟು ಭಾರತ ದೇಶವೇ ನಿರಾಭರಣ ಭಾರತ ಕೊಳ್ಳುತ್ತದೆ,  ಅನ್ನ ನೀಡುವ ಅನ್ನದಾತನಿಗೆ ಮುಕ್ಕಿಯಿಲ್ಲವೇ? ಎಂಬ ಲೇಖನದಲ್ಲಿ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುವಂತಹ ಸದ್ಯದ ವ್ಯವಸ್ಥೆಯೇ ಅದಕ್ಕೆ ತಕ್ಕ ಉತ್ತರ. ಬೆಂಬಲ ಬೆಲೆ ಎಂದು ಗಮನ ಸೆಳೆಯುತ್ತಾರೆ.  
ಧರ್ಮದ ಮೂಲ ಒಳಸುಳಿ ಸತ್ಯಶೋಧನೆಯತ್ತ ಲೇಖನದಲ್ಲಿ ವೀರಶೈವ ಲಿಂಗಾಯತ ಬಗ್ಗೆ ಹೇಳುತ್ತಾರೆ. ಪಂಚಪೀಠಾಧೀಶ್ವರರು ತಾವು ಲಿಂಗ ಮೂಲದಿಂದ ಹುಟ್ಟದವರೆನ್ನುತ್ತಾರೆ ನಾಡಿನ ಕನ್ನಡ ಶಾಲೆಗಳಿಗೆ ಸರಕಾರವು ಈ ಸಮಸ್ಯೆಗಳಿಗೆ ಸ್ಪಂದಿಸಬೇಕು. ಫಜಲ್ ಅಲಿ ಆಯೋಗದ ಮುಂದೆ ಗಟ್ಟಿಯಾಗಿ ವಾದಿಸದ್ದರಿಂದ ಕಾಸರಗೋಡು, ಆದವಾನಿ, ಆಲೂರು, ರಾಯದುರ್ಗ, ಮಡಕಶಿರಾ, ಜತ್ತ, ಅಕ್ಕಲಕೋಟಿ, ಸೊಲ್ಲಾಪುರ, ಲಾತೂರು, ಹೊಸೂರುಗಳನ್ನು ಕಳೆದುಕೊಳ್ಳಬೇಕಾಯಿತೆಂದು ಎಂದು ನಾಡಿನ ಭಾಷೆಯ ಸಂಕಷ್ಟ ಮತ್ತು ಗಡಿಬದ್ಧತೆಯ ನಿರ್ಧಾರದ ವಿಫಲತೆಯನ್ನು ಕುರಿತು ಲೇಖಕರು ಆತಂಕವನ್ನು ಹೊರ ಹಾಕಿದ್ದಾರೆ.
 ‘ಭಾರತೀಯ ಸತ್ಯಧರ್ಮದ ಬೆಳಕು ಆನಂದ ಕುಮಾಸ್ವಾಮಿ ಕುರಿತು ಹಾಗೂ ನಾವು ಹಳೆಯ ವಾಹನಗಳನ್ನಿಟ್ಟುಕೊಂಡು ಪರಿಸರ ಹಾಳು ಮಾಡುತ್ತಿದ್ದೇವೆ ಎಂಬುದು ಲೇಖಕರ ವಿಚಾರ. 

 

About the Author

ಮಂಜುನಾಥ ಉಲವತ್ತಿ ಶೆಟ್ಟರ್

ಲೇಖಕ ಮಂಜುನಾಥ ಉಲವತ್ತಿ ಶೆಟ್ಟರ್ ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಉಲವತ್ತಿಯವರು. ತಂದೆ ರೇವಣಸಿದ್ದಪ್ಪ, ತಾಯಿ ನಾಗಮ್ಮ. ಲೇಖಕರು ಎಂ.ಎ, ಎಂ,ಫಿಲ್ ಪದವೀಧರರು. ಬಳ್ಳಾರಿಯಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರು. ಆರ್ಥಿಕ, ಪ್ರಚಲಿತ, ವೈಚಾರಿಕ, ವೈಜ್ಞಾನಿಕ, ಸಾಮಾಜಿಕ, ಐತಿಹಾಸಿಕ ಮತ್ತು  ಸಾಂಸ್ಕೃತಿಕ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸದ್ಯ, ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಸಹಪ್ರಾಧ್ಯಾಪಕರು. ಪ್ರಸ್ತುತ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವ್ಯಾಸಂಗ ಮಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲಾ ಪ್ರಗತಿಪರ ಚಿಂತಕರ ಒಕ್ಕೂಟದಲ್ಲಿದ್ದು, ಸೆಮಿನಾರ್, ವಿಶೇಷ ಉಪನ್ಯಾಸಗಳನ್ನು ನೀಡಿದ್ದು, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ...

READ MORE

Related Books