ಕವಿ ದ.ರಾ. ಬೇಂದ್ರೆ ಅವರ ಸಾಹಿತ್ಯ-ವ್ಯಕ್ತಿತ್ವದ ದರ್ಶನ ಕುರಿತು ಪತ್ರಿಕೆಗಳಿಗೆ ಬರೆದ ಲೇಖನಗಳ ಸಂಗ್ರಹವೇ ಈ ನಂಟು ಕೃತಿ. ಮುನ್ನುಡಿ ಬರೆದ ಡಾ. ವಾಮನ ಬೇಂದ್ರೆ ‘ಬೇಂದ್ರೆ ಅವರ ಕಾವ್ಯದ ಪ್ರಜ್ಞಾಪ್ರಕಾಶದತ್ತ ಹೊರಳಿರುವ ಸಂಗಮೇಶ ತಮ್ಮನಗೌಡ್ರ, ತಮ್ಮ ಜೀವನಕ್ಕೆ ಬೇಂದ್ರ ಕಾವ್ಯ ಹೇಗೆ ಸಾಣೆ ಹಿಡಿದಿದೆ ಎಂಬುದನ್ನು ತೋರಿರುವ ಈ ಲೇಖನಗಳು ಬಹು ಮೌಲಿಕವಾಗಿವೆ : ಮಾತ್ರವಲ್ಲ; ಬೇಂದ್ರೆ ಅವರ ಅಗಾಧ-ಅಪಾರ-ವಿಸ್ತಾರದ-ಎತ್ತರದ ಜೀವನಕ್ಕೆ ಕಾರಣವಾಗಿರುವ ಎಲ್ಲ ಸಾಧ್ಯತೆಗಳನ್ನು ಅತ್ಯಂತ ಆತ್ಮೀಯವಾಗಿ ಚರ್ಚಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ. ಬೇಂದ್ರೆ ಅವರು ಮತ್ತು ಭಾವಗೀತೆಯ ನಂಟು, ಬೇಂದ್ರೆ ಅವರ ಪ್ರಜ್ಞಾವಲಯದ ಭವ ಮತ್ತು ಅನುಭಾವ ವಿಚಾರ, ಬೇಂದ್ರೆ ಅವರ ಕಾಲಾತೀತ ಪ್ರಜ್ಞೆ, ಬೇಂದ್ರೆ ಅವರು ಕರಗತ ಮಾಡಿಕೊಂಡಿರುವ ಜ್ಞಾನಸಿಂಧುವಿನ ಗುಟ್ಟು, ಹೀಗೆ ವಿವಿಧ ಅಧ್ಯಾಯಗಳಡಿ ವರಕವಿ ಬೇಂದ್ರೆ ಅವರ ವಿಚಾರ-ಭಾವ-ಸಾಹಿತ್ಯದ ಮೌಲ್ಯವನ್ನು ಚರ್ಚಿಸಿ, ಓದುಗರಿಗೆ ಸರಳವಾಗಿ ನೀಡಿದ್ದು, ಕೃತಿಯ ವೈಶಿಷ್ಟ್ಯ
ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...
READ MORE