‘ಮರಳಿ ಮನೆಗೆ’ ಅಂಬೇಡ್ಕರ್ ಮತ್ತು ಬುದ್ಧನ ತತ್ವಗಳ ಕುರಿತ ಲೇಖನ ಸಂಕಲನ. ಹಿರಿಯ ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಪ್ರೊ.ಜಿ.ಎಸ್. ಶಿವರುದ್ರಪ್ಪ ಅವರ ಬುದ್ಧಂ ಶರಣಂ ಗಚ್ಛಾಮಿ, ಡಾ.ತಾಳ್ತಜೆ ವಸಂತಕುಮಾರ್ ಅವರ ಬೌಗ್ಘಧರ್ಮದ ಬೆಳವಣಿಗೆ, ದರ್ಶನ ಹಾಗೂ ಸಾಹಿತ್ಯ, ಪ್ರೊ.ಬಿ. ಕೃಷ್ಣಪ್ಪ ಅವರ ದಲಿತರು ಮತ್ತು ಮತಾಂತರ, ನಾಗಾರ್ಜುನ, ಡಾ.ಡಿ.ಆರ್. ನಾಗರಾಜ್ ಅವರ ಪರಂಪರೆಯ ಕೊಳಕು ಮತ್ತು ಆಧುನಿಕ ವಿಕಾರಗಳೆರಡಕ್ಕ ಮದ್ದು, ಪಿ. ಲಂಕೇಶ್ ಅವರ ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ, ಡಾ. ರಾಮಮನೋಹರ ಲೋಹಿಯಾ ಅವರ ಶೂದ್ರನಿಗೊಂದು ಪತ್ರ, ಗಂಗಾಧರ ಮೂರ್ತಿ ಅವರ ಅನುವಾದಿತ ಲೇಖನ ನಿನಗೆ ನೀನೇ ಬೆಳಕು ಎಂದಿದ್ದ ಬುದ್ಧ, ಡಾ. ಪ್ರಭುಶಂಕರ ಅವರ ಓಶೋ ಅವರ ದೃಷ್ಟಿಯಲ್ಲಿ ಗೌತಮಬುದ್ಧ ಮತ್ತು ಅವನ ಧರ್ಮ, ಡಾ. ಎಸ್. ಚಂದ್ರಶೇಖರ್ ಅವರ ಅಂಬೇಡ್ಕರ್ ವಾದ ಮತ್ತು ಜಾತಿವಿನಾಶ, ವೈ.ಬಿ. ನಂದನ ಅವರ ಅನುಭಾವ:ಬೌದ್ಧ ಮತ್ತು ವಚನಧರ್ಮಗಳ ಅನುಬಂಧ, ಪ್ರಸನ್ನ ಅವರ ಪ್ರತಿರೋಧದ ಎರಡು ಚಿತ್ರಗಳು, ರವೀಂದ್ರನಾಥ ಠ್ಯಾಗೂರ್ ಅವರ ಧಮ್ಮಪದ, ಪ್ರೊ.ಕೆ.ಎಸ್. ಭಗವಾನ್ ಅವರ ಬುದ್ಧನ ಅನನ್ಯತೆ, ಎಚ್.ಎಲ್. ನಾಗೇಗೌಡ ಅವರ ಫಾಹಿಯಾನ್ ಕಂಡ ಬುದ್ಧ ಭಾರತ, ಎಚ್.ಎಲ್. ನಾಗೇಗೌಡ, ಕುವೆಂಪು ಅವರ ಬುದ್ಧದೇವ, ದ.ರಾ. ಬೇಂದ್ರೆ ಅವರ ಬುದ್ಧ, ವಿ.ಕೃ. ಗೋಕಾಕ್ ಅವರ ನಿರ್ಮಾಣಕಾಯ, ಪು.ತಿ.ನರಸಿಂಹಾಚಾರ್ ಅವರ ಬುದ್ಧ, ಗೋಪಾಲ ಕೃಷ್ಣ ಅಡಿಗರ ಅಂಬೇಡಕರ ಭೀಮರಾಯರಿಗೆ, ಚೆನ್ನವೀರ ಕಣವಿ ಅವರ ಬುದ್ಧೋದಯ, ಶ್ಯಾಮಸುಂದರ ಬಿದರಕುಂದಿ ಅವರ ಬುದ್ಧನಗೆ, ಸಿದ್ಧಲಿಂಗಯ್ಯ ಅವರ ಅಂಬೇಡ್ಕರ್, ಕಾಳೇಗೌಡ ನಾಗವಾರ ಅವರ ಚಲನೆ, ಅರವಿಂದ ಮಾಲಗತ್ತಿ ಅವರ ಸೂರ್ಯ, ಚಂದ್ರಶೇಖರ ಪಾಟೀಲ ಅವರ ನಿನ್ನೆಗಳ ನೆನಪು, ಚಂದ್ರಶೇಖರ ಕಂಬಾರ ಅವರ ಅಂಬೇಡಕರರು ಸೇರಿದಂತೆ 225 ಮಹತ್ವದ ಲೇಖಕರ ಲೇಖನಗಳು ಸಂಕಲನಗೊಂಡಿವೆ. ಜೊತೆಗೆ ಬೌದ್ಧಧರ್ಮ ಹಾಗೂ ಅಂಬೇಡ್ಕರ್ ಅವರ ಕುರಿತಾದ ಮಹತ್ವದ ಸಂದರ್ಶನಗಳನ್ನು ಈ ಕೃತಿ ಒಳಗೊಂಡಿದೆ.
©2024 Book Brahma Private Limited.