‘ಮಾನವೀಯ ಮೌಲ್ಯ ಮತ್ತುಧರ್ಮ’ ಸುಮುಖಾನಂದ ಜಲವಳ್ಳಿ ಅವರ ವೈಚಾರಿಕ ಕೃತಿಯಾಗಿದೆ. ಸರ್ವಧರ್ಮಗಳ ಸಾರವೂ ಮಾನವನ ಒಳಿತಿಗಾಗಿ ಇರಬೇಕೆಂಬ ಮಹತ್ವದ ದನಿಯೊಂದನು ಈ ಲೇಖನಗಳು ಪ್ರತಿಪಾದಿಸುತ್ತವೆ.
ಸಾಹಿತಿ ಸುಮುಖಾನಂದ ಜಲವಳ್ಳಿ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿ ಗ್ರಾಮದವರು. ಇವರಿಗೆ ಉತ್ತರ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಜಾನಪದ ತಜ್ಞೆ ಶಾಂತಿ ನಾಯಕ , ಡಾ. ಎನ್. ಆರ್. ನಾಯಕ (ಜೀವನ ಚರಿತ್ರೆಗಳು) ಜಲವಳ್ಳಿ ಗ್ರಾಮ ಅಧ್ಯಯನ ಎಂಬುದು ಇವರ ಕೃತಿಗಳು. ...
READ MOREಹೊಸತು-2002- ಜನವರಿ
ಇಂದು ಧರ್ಮಕ್ಕೆ ವಿವಿಧ ವ್ಯಾಖ್ಯಾನಗಳಿವೆ. ಮನುಷ್ಯ ಉಪಕಾರಿಯಾಗಿ ಬಾಳಲು ರೂಪಿಸಿಕೊಂಡ ಕಟ್ಟುಪಾಡುಗಳಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ವಿಚಾರಗಳಲ್ಲಿ ಬಂದ ಭಿನ್ನಾಭಿಪ್ರಾಯಗಳಿಂದ ಭಿನ್ನ ಸಂಸ್ಕೃತಿಗಳೇ ರೂಪುಗೊಳ್ಳುತ್ತ ನಡೆದು, ಮತಗಳಾಗಿ ಒಡೆದು ಇಂದು ಮತಾಂಧತೆಯ ಅಪಾಯಕಾರಿ ಘಟ್ಟ ತಲುಪಿವೆ. ಸರ್ವಧರ್ಮಗಳ ಸಾರವೂ ಮಾನವನ ಒಳಿತಿಗಾಗಿ ಇರಬೇಕೆಂಬ ಮಹತ್ವದ ದನಿಯೊಂದನ್ನು ಈ ಲೇಖನಗಳು ಪ್ರತಿಪಾದಿಸುತ್ತವೆ. ಲೇಖಕರ ಕಾಳಜಿಯೂ ಅದೇ.