‘ಕೊರೋನ ನಂತರದ ಗ್ರಾಮ ಭಾರತ’ ಲೇಖಕ ನರೇಂದ್ರ ರೈ ದೇರ್ಲ ಅವರ ಲೇಖನ ಸಂಕಲನ. ಕೃಷಿಯೊಂದೇ ಸತ್ಯ, ಉಳಿದಿದ್ದೆಲ್ಲಾ ಮಿಥ್ಯೆ. ಎಂಬ ಮಾತು ಅಕ್ಷರಶಃ ಸತ್ಯ ಅನ್ನಿಸುವುದು ಸಂಕಷ್ಟದ ಸಮಯಗಳಲ್ಲೇ ಹಾಗೇ ಕೊರೋನ ಕಾಲದಲ್ಲಿ ಸಹ ಈ ಮಾತು ಸತ್ಯವೆನಿಸಿದೆ. ಇಂಥಹ ಸತ್ಯದರ್ಶನಗಳನ್ನು ನೀಡುವುದು ಈ ಕೃತಿ.
ಎಲ್ಲರನ್ನೂ ಆಳ ಚಿಂತನೆಗೆ ಹಚ್ಚಬಲ್ಲ ಕೃತಿ. ಆಡಳಿತದ ಮಂದಿ, ಶಿಕ್ಷಣ ತಜ್ಞರು, ಅಧ್ಯಾಪಕರು, ಅಷ್ಟೇ ಏಕೆ, ದೇಶದ ಎಲ್ಲಾ ವಿದ್ಯಾರ್ಥಿಗಳು ಇದನ್ನು ಓದಬೇಕು ಎನ್ನುತ್ತಾರೆ ಶ್ರೀಪಡ್ರೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಅವರು ಕೃತಿಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ದೇರ್ಲರ ಕೃತಿ ಕಬ್ಬಿನಂತೆ, ಜಗಿದರಷ್ಟೇ ಸಿಹಿ ಸ್ರವಿಸುತ್ತದೆ. ಇಲ್ಲಿರುವುದು ಎಲ್ಲವೂ ಸಿಹಿಯೇ ಅಲ್ಲ. ಕಹಿಯೂ ಇದೆ. ಉತ್ತರ ಕಾಣದ ಮಹತ್ವದ ಪ್ರಶ್ನೆ ವಾಸ್ತವಗಳೂ ಇವೆ.
"ಕೊರೋನಾ ನಂತರದ ಗ್ರಾಮ ಭಾರತ" ಕೃತಿಯ ಕುರಿತು ನರೇಂದ್ರ ರೈ ದೇರ್ಲ
©2024 Book Brahma Private Limited.