ವಿಶ್ವ ಗ್ರಾಮದ ಪರಿಕಲ್ಪನೆಯಲ್ಲಿ ಭಾರತದ ಜಾತಿ ಪದ್ಧತಿ ಹಾಗೂ ಅಸ್ಪೃಶ್ಯತೆಯ ಸ್ವರೂಪವನ್ನು ಅಧ್ಯಯನ ಮಾಡುವ ಹಾಗೂ ಲೇಖಕ ಡಾ. ಮೂಡ್ಕೃನಾಕೂಡು ಚಿನ್ನಸ್ವಾಮಿ ಬರೆದ ’ಕಂಗಳ ಮುಂದಣ ಕತ್ತಲು” (ವಿಶ್ವಗ್ರಾಮದಲ್ಲಿ ವಿಶ್ವ ಮಾನವನಿಲ್ಲ) ಕೃತಿಯು ಚಿಂತನೆ ಪ್ರೇರಣೆ ಕೃತಿ. ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಭಾರತದ ಸಂವಿಧಾನದ ಪ್ವರಭಾವವನ್ನ್ನುನು ತಗ್ಗಿಸುವ ಶಕ್ತಿಗಳು ಇಂದಿಗೂ ಸಕ್ರಿಯವಾಗಿವೆ ಎಂಬುದು ಲೇಖಕರ ವಿಷಾದ. ತಮ್ಮ ಚಿಂತನೆಯನ್ನು ಎರಡು ವಿಭಾಗಗಳಲ್ಲಿ ವರ್ಗೀಕರಿಸಿದ್ದಾರೆ. ಭಾಗ-1 ರಲ್ಲಿ ವಿಶ್ವಗ್ರಾಮದ ಪರಿಕಲ್ಪನೆಯಲ್ಲಿ ಭಾರತೀಯ ಜಾತಿ ಪದ್ಧತಿ, ಮಾರುಕಟ್ಟೆ, ಮಹಿಳೆ ಮತ್ತು ಮಕ್ಕಳ ಶೋಷಣೆ ಒಳಗೊಂಡಿದ್ದರೆ ಭಾಗ-2 ರಲ್ಲಿ, ಸುಧಾರಣಾವಾದಿ ಚಳವಳಿಗಳ ಇತಿಹಾಸ ಹಾಗೂ ಪರಿಣಾಮ, ಮೀಸಲಾತಿ ಎಂಬ ಮದ್ದು, ಸವರ್ಣೀಯರೊಡನೆ ಅಸ್ಪೃಶ್ಯರ ಸಾಂಸ್ಕೃತಿಕ ಹಾಗೂ ರಾಜಕೀಯ ಅಂತರ್ ಸಂಬಂಧಗಳು ಹೀಗೆ ವಿಷಯಗಳ ಚಿಂತನೆ ಒಳಗೊಂಡಿದೆ.
ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...
READ MORE